ಉಡುಪಿ: ಕೇರಳ ರಾಜ್ಯದ ತಿರುವಂತಪುರಂ ಗ್ರಾಮಾಂತರ ಜಿಲ್ಲೆಯ ವಾಟಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಆರೋಪಿ ರಾಜೇಶ (39) ಎಂಬಾತನು ಬಂಧಿತನಾಗಿದ್ದು ಸದ್ರಿ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ, ನಡೆದಿದ್ದು, ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಆರೋಪಿಯು ತಿರುವಂತಪುರಂ ಕೇಂದ್ರ ಕಾರಾಗೃಹದಲ್ಲಿ ಇದ್ದು ನಂತರ ನೆಟ್ಟುಕತಾರಿ ಬದಲು ಜೈಲ್ ಗೆ ವರ್ಗಾಯಿಸಲಾಗಿತ್ತು. ಆದರೆ 2020 ಡಿ. 23ರಂದು ನೆಟ್ಟುಕತಾರಿ ಬಯಲು ಜೈಲ್ ನಿಂದ ಪರಾರಿಯಾಗಿದ್ದು ಈ ಬಗ್ಗೆ ನೇಯಾರ್ ಡಾಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಾಲಾಗಿದ್ದು ಆರೋಪಿ ರಾಜೇಶ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ.

ಆರೋಪಿ ರಾಜೇಶ್ 2012 ರಲ್ಲಿ ಕೇರಳ ರಾಜ್ಯದ ಅಪ್ರಾಪ್ತಿಯ ಕೊಲೆ ಹಾಗೂ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ನ್ಯಾಯಾಲಯವು ತ್ವರಿತ ಗತಿಯ ವಿಚಾರಣೆ ನಡೆಸಿ 2013ರಲ್ಲಿ ಗಲ್ಲು ಶಿಕ್ಷೆ ವಿಧಿಸಿದ್ದು, ನಂತರ ಜೀವಾವಧಿ ಶಿಕ್ಷೆಯಾಗಿ ಮಾರ್ಪಾಡು ಆಗಿತ್ತು.
ಸದ್ಯ ಆರೋಪಿ ಉಡುಪಿಯಲ್ಲಿ ವಾಸವಾಗಿರುವ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಏಮ್ ಹೆಚ್ ಮಾರ್ಗದರ್ಶನದಂತೆ, ಬ್ರಹ್ಮಾವರ ಸಿಪಿಐ ಅನಂತ ಪದ್ಮನಾಭ ನೇತೃತ್ವದ ತಂಡ ಪ್ರಕರಣದ ಆರೋಪಿಯನ್ನು ಬ್ರಹ್ಮಾವರ ತಾಲೂಕು ಬಿಲ್ಲಾಡಿ ಗ್ರಾಮದ ಕಬ್ಬಿನ ಹಿತ್ಲು ಎಂಬಲ್ಲಿ ವಶಕ್ಕೆ ಪಡೆದು ಕೇರಳ ಪೊಲೀಸ್ ರಿಗೆ ಮಾಹಿತಿ ನೀಡಿದ್ದು ಕೇರಳ ಪೊಲೀಸರು ಆರೋಪಿ ರಾಜೇಶನನ್ನು ವಶಕ್ಕೆ ಪಡೆದು ಕುಂದಾಪುರ ನ್ಯಾಯಾಲಯದ ಮುಂದೆ ಹಾಜರು ಪಡಿಸಿ ನ್ಯಾಯಾಲಯದ ಆದೇಶ ಪಡೆದು ಕೇರಳಕ್ಕೆ ಕರೆದೊಯ್ದಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ ಎಮ್.ಹೆಚ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ ಸಿದ್ಧಲಿಂಗಪ್ಪ ಮಾರ್ಗದರ್ಶನದಂತೆ, ಉಡುಪಿ ಡಿವೈಎಸ್ಪಿ ಸುಧಾಕರ ಎಸ್ ನಾಯ್ಕ್ ನಿರ್ದೇಶನದಂತೆ ಈ ಕಾರ್ಯಾಚರಣೆಯಲ್ಲಿ ಬ್ರಹ್ಮಾವರ ಸರ್ಕಲ್ ಇನ್ಸ್‌ಪೆಕ್ಟರ್ ಅನಂತ ಪದ್ಮನಾಭ, ಕೋಟ ಠಾಣೆ ಪಿಎಸ್ಐ ಮಧು ಬಿ.ಇ, ತನಿಖಾ ವಿಭಾಗದ ಪಿ.ಎಸ್.ಐ ಪುಷ್ಪಾ, ಪ್ರೊಬೇಷನರಿ ಪಿಎಸ್ಐ ನೂತನ್ ಡಿ., ಎ.ಆರ್.ಎಸ್.ಐ, ಜೊಶ್, ಕೋಟ ಪೊಲೀಸ್ ಠಾಣಾ ಎ.ಎಸ್.ಐ ರವಿ ಕುಮಾರ್, ಸಿಬ್ಬಂದಿಗಳಾದ ರಾಘವೇಂದ್ರ, ಪ್ರಸನ್ನ, ವಿಜಯೇಂದ್ರ, ಮಂಜುನಾಥ ಅಸಂಗಿ, ವಿಠಲ, ಉಳುವಪ್ಪ ಹಾಗೂ ಬ್ರಹ್ಮಾವರ ವೃತ್ತ ಕಛೇರಿಯ ರವಿ, ಕೃಷ್ಣ, ಶೇಖರ ಹಾಗೂ ಹೋಮ್ ಗಾರ್ಡ್ ವಿಜಯ ಈ ಪ್ರಕರಣವನ್ನು ಭೇಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
Comments are closed.