ನವದೆಹಲಿ: ಪುನೀತ್ ರಾಜ್ಕುಮಾರ್ ನಟನೆಯ `ಗಂಧದ ಗುಡಿ’ ಸಿನಿಮಾ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಅದಕ್ಕೂ ಮುಂಚೆ ಚಿತ್ರದ ಟ್ರೈಲರ್ ಆಗಿದೆ. ಇದೀಗ ಈ ಚಿತ್ರದ ಟ್ರೈಲರ್ ನೋಡಿ ಪ್ರಧಾನಿ ನರೇಂದ್ರ ಮೋದಿಯವರು ಮೆಚ್ಚುಗೆ ಸೂಚಿಸಿದ್ದಾರೆ.

ಪುನೀತ್ ರಾಜಕುಮಾರ್ ನಟನೆಯ ಕೊನೆಯ ಸಿನಿಮಾ `ಗಂಧದಗುಡಿ’ ಟ್ರೈಲರ್ ರಿಲೀಸ್ ಆಗಿದ್ದು ಈ ಪ್ರಾಜೆಕ್ಟ್ ಬಗ್ಗೆ ಅಶ್ವೀನಿ ಪುನೀತ್ ರಾಜ್ಕುಮಾರ್ ಅವರು ಮೋದಿ ಅವರಿಗೆ ಟ್ರೈಲರ್ ಲಿಂಕ್ ಶೇರ್ ಮಾಡಿ, ಟ್ವೀಟ್ ಮಾಡಿದ್ದರು. ಇದೀಗ ಚಿತ್ರದ ಟ್ರೈಲರ್ ನೋಡಿ ಟ್ವೀಟ್ ಮೂಲಕ ಪ್ರಧಾನಿ ಮೋದಿ ಅವರು ಮೆಚ್ಚುಗೆ ಸೂಚಿದ್ದಾರೆ.

ಅಪ್ಪು ಪ್ರಪಂಚದಾದ್ಯಂತ ಲಕ್ಷಾಂತರ ಜನರ ಹೃದಯದಲ್ಲಿ ನೆಲೆಸಿದ್ದಾರೆ. ಅವರು ತೇಜಸ್ಸಿನ ವ್ಯಕ್ತಿಯಾಗಿದ್ದರು, ಶಕ್ತಿಯಿಂದ ತುಂಬಿದ ಅಪ್ಪು ಪ್ರತಿಭೆಗೆ ಯಾರು ಸರಿಸಾಟಿಯಿಲ್ಲ. `ಗಂಧದಗುಡಿ’ ಪ್ರಕೃತಿ ಮಾತೆಗೆ, ಕರ್ನಾಟಕದ ನೈಸರ್ಗಿಕ ಸೌಂದರ್ಯಕ್ಕೆ ಅರ್ಪಣೆ. ಚಿತ್ರತಂಡದ ಪ್ರಯತ್ನಕ್ಕೆ ನನ್ನ ಶುಭಹಾರೈಕೆಗಳು ಎಂದು ಪ್ರಧಾನಿ ಮೋದಿ ಅವರು ಟ್ರೈಲರ್ ನೋಡಿ ಹೊಗಳಿದ್ದಾರೆ. ಟ್ವೀಟ್ ಮೂಲಕ ಶುಭಹಾರೈಸಿದ್ದಾರೆ.
Comments are closed.