ಕರಾವಳಿ

ಓಣಂ ಪ್ರಯುಕ್ತ ಕುಟುಂಬದೊಂದಿಗೆ ಕೊಲ್ಲೂರು ಯಾತ್ರೆಗೆ ಬಂದ ಕೇರಳ ಮೂಲದ ಮಹಿಳೆ ಸೌಪರ್ಣಿಕಾ ನದಿ ಪಾಲು

Pinterest LinkedIn Tumblr

ಕುಂದಾಪುರ: ಶ್ರೀ ಮೂಕಾಂಬಿಕಾ ದೇಗುಲಕ್ಕೆ ಆಗಮಿಸಿದ ಕೇರಳದ ತಿರುವನಂತಪುರದ ಯಾತ್ರಾರ್ಥಿ ಕುಟುಂಬದ ಮಹಿಳೆಯೊಬ್ಬರು ಸೌಪರ್ಣಿಕಾ ನದಿಯಲ್ಲಿ ಕೊಚ್ಚಿ ಹೋದ ಘಟನೆ ಶನಿವಾರ ಸಂಜೆ ಸಂಭವಿಸಿದೆ.

ತಿರುವನಂತಪುರದಿಂದ 14 ಮಂದಿಯ ತಂಡ ಕೊಲ್ಲೂರು ಕ್ಷೇತ್ರಕ್ಕೆ ಆಗಮಿಸಿದ್ದು ಎಲ್ಲರು ತೀರ್ಥ ಸ್ನಾನಕ್ಕೆಂದು ನದಿಗೆ ಇಳಿದಿದ್ದರು. ಈ ಸಂದರ್ಭ ಮುರುಗನ್‌ ಅವರ ಪತ್ನಿ ಚಾಂದಿ ಶೇಖರನ್‌ (42) ಅವರು ನೀರುಪಾಲಾಗಿದ್ದಾರೆ. ಮಹಿಳೆಗಾಗಿ ಅಗ್ನಿ ಶಾಮಕ ದಳ, ಕೊಲ್ಲೂರು ಪೊಲೀಸರು ಹಾಗು ಗ್ರಾಮಸ್ಥರು ಶೋಧ ಕಾರ್ಯ ನಡೆಸುತ್ತಿದಾರೆ.

ಮುರುಗನ್ ಅವರ ಹೆಂಡತಿ ಚಾಂದಿ ಶೇಖರ್ ಮತ್ತು ಮಗ ಆದಿತ್ಯನ್, ಹಾಗೂ ಮುರುಗನ್ ಅವರ ರಕ್ತ ಸಂಬಂಧಿಗಳು ಇತರ ಕುಟುಂಬ ವರ್ಗದವರೂ ಒಣಂ ಹಬ್ಬದ ಪ್ರಯುಕ್ತ ಕೇರಳ ರಾಜ್ಯದಿಂದ ಹೊರಟು ಸೆ.10 ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಯಾತ್ರೆಗೆ ಬಂದು ಕೊಲ್ಲೂರು ಯಮುನಾ ವಿಹಾರ್ ವಸತಿ ಗೃಹದಲ್ಲಿ ಉಳಿದುಕೊಂಡು ಸಂಜೆ ವೇಳೆ ಕುಟುಂಬದವರೊಂದಿಗೆ ಸೌರ್ಪಾಣಿಕ ಸ್ನಾನ ಘಟ್ಟಕ್ಕೆ ಬಂದಿದ್ದು ಸೌರ್ಪಾಣಿಕ ನದಿಯ ದಡದಲ್ಲಿ ಸ್ನಾನ ಮಾಡಲು ನೀರಿಗೆ ಇಳಿದವರು ಕಾಲು ಜಾರಿ ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿಕೊಂಡು ಹೋಗಿದ್ದು ರಕ್ಷಣೆ ಮಾಡಲು ಅವರ ಮಗ ಆದಿತ್ಯನ್ ನದಿಯ ನೀರಿಗೆ ಇಳಿದಾಗ ಆತನು ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿದ್ದಾನೆ. ಆದಿತ್ಯನ್‌ನನ್ನು ರಕ್ಷಣೆ ಮಾಡಲು ಈಜು ಬಾರದ ಆತನ ತಾಯಿ ಚಾಂದಿಶೇಖರ್ ನದಿಯ ನೀರಿಗೆ ಧುಮುಕಿ ನೀರಿನ ಸೆಳತಕ್ಕೆ ಸಿಕ್ಕಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದಾರೆ. ಮುರುಗನ್ ಮತ್ತು ಆದಿತ್ಯ ಅವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.