ಕರಾವಳಿ

ಮಂಗಳೂರು: ಸ್ಥಳ ಮಹಜರಿಗೆ ಕರೆದೊಯ್ದ ವೇಳೆ ಪರಾರಿಗೆ ಯತ್ನಿಸಿದ ಆರೋಪಿ ಕಾಲಿಗೆ ಪೊಲೀಸರಿಂದ ಫೈರಿಂಗ್​..!

Pinterest LinkedIn Tumblr

ಮಂಗಳೂರು: ಸ್ಥಳ ಮಹಜರಿಗೆ ಹೋದ ವೇಳೆ ಹಲ್ಲೆ ನಡೆಸಿ ಪರಾರಿಗೆ ಯತ್ನಿಸಿದ ಆರೋಪಿ ಕಾಲಿಗೆ ಮಂಗಳೂರು ಪೊಲೀಸರು ಫೈರಿಂಗ್​ ಮಾಡಿದ‌ ಘಟನೆ ನಡೆದಿದೆ.

ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಂಬಳ ಗ್ರಾಮದ ಬಳಿ ಕೊಲೆ ಯತ್ನದ ಆರೋಪಿ ಎಂ.ಡಿ. ಮುಷ್ತಾಕ್​​ನನ್ನು ಸ್ಥಳ ಮಹಜರ್​ಗೆ ಕರೆದೊಯ್ಯಲಾಗಿತ್ತು. ಈ ವೇಳೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಮುಸ್ತಾಕ್​​​ ​​ತಪ್ಪಿಸಿಕೊಳ್ಳಲು ಯತ್ನ ಮಾಡಿದ್ದ. ಆಗಸ್ಟ್​​19 ರಂದು ಕೊಲೆ ಯತ್ನ ಪ್ರಕರಣದಲ್ಲಿ ಮುಷ್ತಾಕ್​​ನನ್ನು ಬಂಧಿಸಲಾಗಿತ್ತು.

ನಿಮ್ಮೆ ಸ್ಥಳ‌ ಮಜಹರು ಮಾಡಲು ಕರೆದೊಯ್ದಾಗ ಆರೋಪಿಯು‌ ಪೊಲೀಸರ ಮೇಲೆರೆಗಿ ತಪ್ಪಿಸಲು‌ ಮುಂದಾದ ಎನ್ನಲಾಗಿದೆ.

Comments are closed.