ಕರಾವಳಿ

ಬೈಂದೂರು ಕ್ಷೇತ್ರದ ಅಭಿವೃದ್ಧಿ ಮಾತ್ರ ನನ್ನ ಗುರಿ, ಮುಂದಿನ ಟಿಕೆಟ್ ಬಗ್ಗೆ ಐದಾರು ಮಂದಿ ಶಬ್ದ‌ ಮಾಡ್ತಿದಾರೆ: ಸುಕುಮಾರ ಶೆಟ್ಟಿ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಉಡುಪಿ: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಬಹಳಷ್ಟು ವಿಸ್ತಾರವಾಗಿದೆ. ಬೈಂದೂರು ಪೇಟೆಯಲ್ಲಿ 25 ಸಾವಿರ ಹಾಗೂ ಇಡೀ ಕ್ಷೇತ್ರದಲ್ಲಿ 2 ಲಕ್ಷ ಮತದಾರರು ಇದ್ದಾರೆ. ಐದಾರು ಜನ ಮಾತ್ರ ನಾವು ನಾವು ಎಂದು ಏನೇನೋ ಹೇಳ್ತಿದ್ದಾರೆ. ಬೈಂದೂರಿನ ಪೇಟೆಯಲ್ಲಿ ಮಾತ್ರ ಅವರದ್ದು ನಾವು ಎಂಬ ಶಬ್ಧ. ನಮ್ಮ ಕಡೆ ಏನೂ ಇಲ್ಲ ಎಲ್ಲಾ ಒಂದೇ ಶಬ್ದವಿದೆ. ಯಾರೂ ತಲೆಬಿಸಿ ಮಾಡಿಕೊಳ್ಳುವುದು ಬೇಡ ಎಂದು ಮುಂಬರುವ ವಿಧಾನಸಭೆ ಚುನಾವಣೆಯ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿಗೆ ಪರೋಕ್ಷವಾಗಿ ಹಾಲಿ ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ ಟಾಂಗ್ ನೀಡಿದ್ದಾರೆ.

ಇತ್ತೀಚೆಗೆ ಬೈಂದೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಕ್ಷದ ಪ್ರಮುಖರು, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು,‌ ಅನಾವಶ್ಯಕವಾಗಿ ಕೆಲವು ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ. ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡು ಬೈಂದೂರು ವಿಧಾನಸಭಾ ಕ್ಷೇತ್ರವನ್ನು ಮಾದರಿಯಾಗಿ ಮಾಡುವ ಸಂಕಲ್ಪ ಮಾಡಿದ್ದು ಈಗಾಗಾಲೇ ವೆಂಟೆಡ್ ಡ್ಯಾಮ್, ಕುಡಿಯುವ ನೀರು, ರಸ್ತೆ ಮೊದಲಾದ ಮೂಲಸೌಕರ್ಯ ಕಾಮಗಾರಿಗಳಿಗೆ ಹಲವು ಕೋಟಿ ಅನುದಾನ ಬಂದಿದೆ ಎಂದವರು ಹೇಳಿದರು.

ಈ ಮೂಲಕ ಮುಂಬರುವ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಬಗ್ಗೆ ಒಂದಷ್ಟು ಮಂದಿ ಮಾಡುತ್ತಿರುವ ಗೊಂದಲಕ್ಕೆ ಹಾಲಿ ಶಾಸಕರು ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ್ದಾರೆ.

Comments are closed.