ಕರ್ನಾಟಕ

ಪಿಎಸ್ಐ ನೇಮಕಾತಿ ಹಗರಣ: ಮೊದಲ ರಾತ್ರಿ ಖುಷಿಯಲ್ಲಿದ್ದಾತ ಸಿಐಡಿ ವಶಕ್ಕೆ..!

Pinterest LinkedIn Tumblr

ಬೆಂಗಳೂರು: ಪಿಎಸ್‌ಐ ಅಕ್ರಮ ನೇಮಕಾತಿಗೆ ಸಂಬಂಧಿಸಿದಂತೆ ಧಾರವಾಡದ ಕೋಚಿಂಗ್ ಸೆಂಟರ್‌ವೊಂದರ ಮಾಜಿ ನಿರ್ದೇಶಕ ಶ್ರೀಕಾಂತ ದುಂಡಪ್ಪ ಚೌರಿ ಅವರನ್ನು ಸಿಐಡಿ ಅಧಿಕಾರಿಗಳು ಬುಧವಾರ ವಶಕ್ಕೆ ಪಡೆದು ಬೆಂಗಳೂರಿಗೆ ವಿಚಾರಣೆಗೆ ಕರೆದೊಯ್ದಿದ್ದಾರೆ‌ ಎನ್ನಲಾಗಿದೆ.

ಶ್ರೀಕಾಂತ ಅವರನ್ನು ರಬಕವಿ–ಬನಹಟ್ಟಿ ತಾಲ್ಲೂಕಿನ ಯರಗಟ್ಟಿಯ ಯಲ್ಲಮ್ಮನ ಗುಡಿಯ ಬಳಿ ವಶಕ್ಕೆ ಪಡೆಯಲಾಗಿದೆ.

ಶ್ರೀಕಾಂತ ಜಮಖಂಡಿ ತಾಲ್ಲೂಕಿನ ತೊದಲಬಾಗಿ ನಿವಾಸಿ. ಮೇ 14ರಂದು ಜಮಖಂಡಿ ನಗರದಲ್ಲಿ ಮದುವೆ ಆಗಿದ್ದರು. ಬುಧವಾರ ಮೊದಲ ರಾತ್ರಿಯ ಸಂಭ್ರಮದಲ್ಲಿದ್ದ ಅವರು ಪತ್ನಿಯ ತವರು ಬೆಳಗಾವಿ ಜಿಲ್ಲೆ ಕಾಗವಾಡಕ್ಕೆ ಹೊರಟಿದ್ದರು. ಮಾರ್ಗ ಮಧ್ಯೆ ದೇವರ ದರ್ಶನ ಪಡೆಯಲು ಯರಗಟ್ಟಿಯ ಯಲ್ಲಮ್ಮನ ಗುಡಿಗೆ ತೆರಳಿದ್ದರು ಎಂದು ತಿಳಿದುಬಂದಿದೆ.

ಶ್ರೀಕಾಂತ ಚೌರಿ ಧಾರವಾಡದ ಇನ್ಪೈರ್ ಇಂಡಿಯಾ ಹೆಸರಿನ ಕೋಚಿಂಗ್ ಸೆಂಟರ್‌ನ ಮಾಜಿ ನಿರ್ದೇಶಕ. ಕೋಚಿಂಗ್‌ ಸೆಂಟರ್‌ಗೆ ಪರೀಕ್ಷಾ ಸಿದ್ಧತೆಗೆ ಬರುವ ಅಭ್ಯರ್ಥಿಗಳಿಂದ ಹಣ ಪಡೆದು ಪಿಎಸ್‌ಐ ನೇಮಕಾತಿ ಪರೀಕ್ಷೆಯ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ.

Comments are closed.