ಕುಂದಾಪುರ: ಹಿಜಾಬ್ ಹಾಗೂ ಸ್ವಾಮೀಜಿಗಳು ತಲೆಮೇಲೆ ಧರಿಸುವ ಬಟ್ಟೆಯ ಬಗ್ಗೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕಿಷ್ಕಿಂದದ ಶ್ರೀ ಗೋವಿಂದ ಸರಸ್ವತಿ ಸ್ವಾಮೀಜಿ ಅಸಮಾಧಾನ ಹೊರ ಹಾಕಿದ್ದಾರೆ.

ಕುಂದಾಪುರದಲ್ಲಿ ಮಾತನಾಡಿದ ಶ್ರೀಗಳು, ಸಾವಿರ ಕೋಟಿ ಜನ್ಮ ಎತ್ತಿದರೂ ಹಿಂದೂ ಸಂತರ ಬಗ್ಗೆ ಮಾತನಾಡಲು ಯೋಗ್ಯತೆಯಿಲ್ಲ. ಸಿದ್ದರಾಮಯ್ಯ ಹೆಸರಿನಲ್ಲೇ ರಾಮ ಇದ್ದಾರೆ. ಸುಮ್ಮನೆ ಮನೆಯಲ್ಲಿ ಇದ್ದುಕೊಂಡು ರಾಮನಾಮ ಜಪ ಮಾಡಿಕೊಳ್ಳಿ. ಆಗ ನಿಮ್ಮ ಜನ್ಮ ಉದ್ದಾರ ಆಗುತ್ತದೆ ಹಿಂದೂ ಧರ್ಮದ ಮೇಲೆ ಕೈಇಡುತ್ತೇನೆ. ಹಿಂದೂ ಧರ್ಮವನ್ನು ಪ್ರಶ್ನೆ ಮಾಡುತ್ತೇನೆ ಎಂದು ಮುಂದಾದರೆ, ಹಿಂದೆ ರಾಕ್ಷಸರಿಗೆ ಆದ ಗತಿ ನಿಮಗೂ ಆಗುತ್ತದೆ ಎಂದರು.
ಹಿಂದೂ ಸನ್ಯಾಸಿಗಳು, ಹಿಂದೂ ಧರ್ಮೀಯರ ಬಗ್ಗೆ ಮಾತನಾಡುವ ಅಧಿಕಾರ ನಿಮಗಿಲ್ಲ. ಸನ್ಯಾಸಿಗಖು ತಲೆಮೇಲೆ ಬಟ್ಟೆ ಧರಿಸಿದರೂ ಕೂಡ ಅವರೇನು ಶಾಲೆಗೆ ಕಾಲೇಜಿಗೆ ಹೋಗುತ್ತಲಿಲ್ಲವಲ್ಲ?. ಹಿಜಾಬ್ ಧರಿಸುವವರು ಮತ್ತು ಸನ್ಯಾಸಿಗಳ ವತ್ಯಾಸ ನಿಮಗೆ ಗೊತ್ತಿಲ್ಲವೇ? ಇಂಥ ಜನಗಳು ಬಂದು ನಾಯಕರಾದರೆ ಅಧರ್ಮವಾಗಿ ಹೋಗುತ್ತದೆ. ಇಂತಹ ನಾಯಕರಿಗೆ ಚೆನ್ನಾಗಿ ಬುದ್ಧಿ ಕಲಿಸಬೇಕು. ಸಿದ್ದರಾಮಯ್ಯ ಒಬ್ಬರಿಗೆ ಎಚ್ಚರಿಕೆಯಲ್ಲ ಎಲ್ಲಾ ನಾಯಕರಿಗೆ ಇದೇ ಎಚ್ಚರಿಕೆ ಎಂದು ಕಿಷ್ಕಿಂದದ ಶ್ರೀಗೋವಿಂದ ಸರಸ್ವತಿ ಸ್ವಾಮೀಜಿ ಖಡಕ್ ಆಗಿ ತಿರುಗೇಟು ನೀಡಿದ್ದಾರೆ.
Comments are closed.