ಮಂಗಳೂರು: ಪೇರಳೆಹಣ್ಣು ತಿನ್ನಲು ಮನೆ ಸಮೀಪದಲ್ಲಿದ್ದ ಮರ ಹತ್ತಲು ಹೋಗಿ ಉರುಳಿ ಬಿದ್ದು ಮೃತಪಟ್ಟ ಧಾರುಣ ಘಟನೆ ಕಡಬ ತಾಲೂಕಿನ ಕಾಣಿಯೂರು ಸಮೀಪದ ದೋಳ್ಪಾಡಿ ಬಳಿ ನಡೆದಿದೆ.

ಮೃತ ಬಾಲಕನನ್ನು ದೋಳ್ಪಾಡಿ ಮರಕ್ಕಡ ನಿವಾಸಿ ದಿವಾಕರ ಗೌಡ ಎಂಬವರ ಪುತ್ರ 8ರ ಹರೆಯದ ಉಲ್ಲಾಸ್ ಡಿ.ಎಂ ಎಂದು ಗುರುತಿಸಲಾಗಿದೆ. ದೋಳ್ಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಉಲ್ಲಾಸ್ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ.
ಗುರುವಾರ ಸಂಜೆ ಶಾಲೆ ಮುಗಿಸಿ ಮನೆಗೆ ಬಂದ ಬಳಿಕ ಮನೆ ಸಮೀಪದ ಪೇರಳೆ ಹಣ್ಣು ಕೊಯ್ಯಲು ಮರಕ್ಕೆ ಹತ್ತಿದ್ದು ಈ ವೇಳೆ ಆಯತಪ್ಪಿ ಕೆಳಕ್ಕೆ ಉರುಳಿದಾಗ ಕೆನ್ನೆಯ ಭಾಗಕ್ಕೆ ಏಟಾಗಿ ಮೃತಪಟ್ಟಿದ್ದಾನೆ. ಮೃತ ಉಲ್ಲಾಸ್ ತಂದೆ ದಿವಾಕರ್, ತಾಯಿ ಹಾಗೂ ಸಹೋದರನನ್ನು ಅಗಲಿದ್ದಾರೆ.
Comments are closed.