ಉಡುಪಿ: ಹಿಜಾಬ್ ಕುರಿತ ಹೈಕೋರ್ಟ್ ತೀರ್ಪಿನ ವಿರುದ್ದ ಅಸಮಾಧಾನ ವ್ಯಕ್ತಪಡಿಸಿ ಗುರುವಾರ ಮುಸ್ಲಿಂ ಸಮುದಾಯದವರು ರಾಜ್ಯದಾದ್ಯಂತ ಬಂದ್ ಆಚರಿಸಿದ ಬೆನ್ನಲ್ಲೆ ಇತಿಹಾಸ ಪ್ರಸಿದ್ದ ಕಾಪು ಮಾರಿ ಪೂಜೆಯಲ್ಲಿ ಯಾವುದೇ ಮುಸ್ಲಿಂ ಸಮುದಾಯದವರಿಗೆ ಅಂಗಡಿ ನಡೆಸಲು ಅವಕಾಶ ನೀಡದಂತೆ ಕೋರಿ ಕಾಪು ಪುರಸಭೆಯ ಮುಖ್ಯಾಧಿಕಾರಿಗೆ ಹಿಂದೂ ಕಾರ್ಯಕರ್ತರ ಹೆಸರಿನಲ್ಲಿ ಪತ್ರ ಮುಖೇನ ಮನವಿ ಮಾಡಲಾಗಿದೆ.

ಕಾಪು ಹಿಂದೂ ಕಾರ್ಯಕರ್ತರು ಎಂಬ ವಿಳಾಸದಲ್ಲಿ ಕಾಪು ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದಂತೆ ಕಂಡುಬಂದಿದೆ. ಅದರಲ್ಲಿ ಉಡುಪಿ ಜಿಲ್ಲೆ, ಕಾಪು ತಾಲೂಕು, ಕಾಪು ಪುರಸಭೆ ವ್ಯಾಪ್ತಿಯಲ್ಲಿ ಬರುವ ಪಡು ಗ್ರಾಮದ ಮೂರು ಮಾರಿಗುಡಿಗಳಲ್ಲಿ ದಿನಾಂಕ: 22-03-2022 ಮತ್ತು 23-03-2022 ರಂದು ನಡೆಯುವ ಮಾರಿಪೂಜೆಯಲ್ಲಿ ಯಾವುದೇ ಮುಸ್ಲಿಂ ಸಮುದಾಯದವರಿಗೆ ಅಂಗಡಿ/ಸ್ಟಾಲ್‌ಗಳನ್ನು ನಡೆಸಲು ಅವಕಾಶ ಕೊಡಬಾರದು ಒಂದು ವೇಳೆ ಮುಸ್ಲಿಂ ಸಮುದಾಯದವರಿಗೆ ಅಂಗಡಿ/ಸ್ಟಾಲ್‌ಗಳನ್ನು ನಡೆಸಲು ಅವಕಾಶಕೊಟ್ಟರೆ ಅದರಿಂದ ಉಂಟಾಗುವ ಯಾವುದೇ ತೊಂದರೆ ಅಥವಾ ಅನಾಹುತಗಳಿಗೆ ನೀವೆ ಜವಾಬ್ದಾರರು. ಆದುದರಿಂದ ತಾವು ಮುಸ್ಲಿಂ ಸಮುದಾಯದವರಿಗೆ ಅಂಗಡಿ ನಡೆಸಲು ಅವಕಾಶ ಕೊಡಬಾರದದೆಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಮನವಿ ಪತ್ರದಲ್ಲಿ ಯಾವುದೇ ಅಧಿಕೃತ ವ್ಯಕ್ತಿಗಳ ಸಹಿ ಇಲ್ಲದೆ ಇದ್ದು ಸದ್ಯ ಮನವಿ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Comments are closed.