ಕರಾವಳಿ

ಶಿವಮೊಗ್ಗ ಹಿಂದೂ ಯುವಕನ ಹಂತಕರನ್ನು 24 ಗಂಟೆಯೊಳಗೆ ಅರೆಸ್ಟ್ ಮಾಡಿ: ನಳೀನ್ ಕುಮಾರ್ ಟ್ವೀಟ್

Pinterest LinkedIn Tumblr

ಬೆಂಗಳೂರು: ಶಿವಮೊಗ್ಗದಲ್ಲಿ ಯುವಕನ ಹತ್ಯೆ ಪ್ರಕರಣದ ಬಗ್ಗೆ ಬಿಜೆಪಿ ಅಧ್ಯಕ್ಷ  ನಳೀನ್​ ಕುಮಾರ್​ ಕಟೀಲ್​​​ ಪ್ರತಿಕ್ರಿಯಿಸಿ ಹರ್ಷ ಹತ್ಯೆಯನ್ನು ಪಕ್ಷ ತೀವ್ರವಾಗಿ ಖಂಡಿಸುತ್ತದೆ. ಹಂತಕರನ್ನು 24 ಗಂಟೆಯೊಳಗೆ ಅರೆಸ್ಟ್ ಮಾಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ , ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಹರ್ಷ ಅವರನ್ನು ದುಷ್ಕರ್ಮಿಗಳು ಹತ್ಯೆಗೈದಿರುವುದು ಖಂಡನೀಯ. ಹಿಜಾಬ್ ವಿವಾದದ ನಡುವೆ ಇಂತಹ ಕೃತ್ಯ ನಡೆದಿದೆ. ಶಾಂತಿ ಕದಡುವ ಪ್ರಯತ್ನ ಮಾಡಿದವರನ್ನು ಸುಮ್ಮನೆ ಬಿಡಬೇಡಿ. ಆರೋಪಿಗಳನ್ನು ಕೂಡಲೇ ಅರೆಸ್ಟ್ ಮಾಡಿ ಎಂದು ಟ್ಟೀಟ್​ ಮಾಡಿದ್ದಾರೆ.

Comments are closed.