ಆರೋಗ್ಯ

ಸಚಿವರಾದ ಮಾಧುಸ್ವಾಮೀ, ಎಸ್.ಟಿ ಸೋಮಶೇಖರ್ ಅವರಿಗೂ ಕೋವಿಡ್-19 ಸೋಂಕು ದೃಢ

Pinterest LinkedIn Tumblr

ಬೆಂಗಳೂರು: ಕೊರೋನಾ ಮೂರನೇ ಅಲೆಯು ವೇಗವಾಗಿ ಹರಡುತ್ತಿದೆ. ಸೋಮವಾರವಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೋವಿಡ್-19 ದೃಢಪಟ್ಟಿತ್ತು. ಇಂದು ಅವರ ಸಂಪುಟದ ಮತ್ತಿಬ್ಬರಿ ಹಿರಿಯ ಸಚಿವರಾದ ಜೆ.ಸಿ ಮಾಧುಸ್ವಾಮಿ ಹಾಗೂ ಎಸ್.ಟಿ‌ ಸೋಮಶೇಖರ್ ಅವರಿಗೆ ಕೊರೋನಾ ಪಾಸಿಟಿವ್ ಬಂದಿದೆ.

ಈ ಹಿಂದೆ ರಾಜ್ಯ ಸಚಿವ ಸಂಪುಟದ ಸಚಿವರುಗಳಾದ ಆರ್ ಅಶೋಕ್ ಮತ್ತು ಬಿ.ಸಿ ನಾಗೇಶ್ ಅವರಿಗೆ ಕೊರೋನಾ ಪಾಸಿಟಿವ್ ಬಂದು ಗುಣಮುಖರಾಗುತ್ತಿದ್ದಾರೆ. ಮಂಗಳವಾರ ಸಿಎಂ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಅವರಿಗೆ ಕೊರೋನಾ ಪಾಸಿಟಿವ್ ದೃಢವಾಗಿತ್ತು.

ಇನ್ನು ಕಳೆದ ಮೂರ್ನಾಲ್ಕು ದಿನಗಳಿಂದ ಮುಖ್ಯಮಂತ್ರಿಗಳೊಂದಿಗೆ ನೇರ ಸಂಪರ್ಕದಲ್ಲಿ ಸಚಿವರು, ಅಧಿಕಾರಿಗಳಿಗೆ ಕೊರೋನಾ ಆತಂಕ ಶುರುವಾಗಿದೆ.

Comments are closed.