ಪ್ರಮುಖ ವರದಿಗಳು

ಅಖಿಲೇಶ್ ಯಾದವ್ ಕನಸಲ್ಲಿ ಶ್ರೀ ಕೃಷ್ಣ ಬಂದು ಹೇಳೋದೇನಂತೆ ಗೊತ್ತಾ..?

Pinterest LinkedIn Tumblr

ಲಖನೌ: ಉತ್ತರ ಪ್ರದೇಶದ ವಿಧಾನಸಭಾ ಚುನಾವಣಾ ಪ್ರಚಾರದ ನಡುವೆಯೇ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ನನ್ನ ಕನಸಿನಲ್ಲಿಯೂ ಶ್ರೀ ಕೃಷ್ಣ ಪರಮಾತ್ಮ ಬರುತ್ತಾನೆ ಎಂದು ಹೇಳಿದ್ದಾರೆ.

ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಶ್ರೀಕೃಷ್ಣ ಜೀ ಅವರು ಕನಸಿನಲ್ಲಿಯೂ ಬರುತ್ತಾರೆ. ಬಂದು ನಿಮ್ಮ ಸರ್ಕಾರ ರಚನೆಯಾಗಲಿದೆ ಎಂದು ಹೇಳಿದರು ಎಂದು ಅಖಿಲೇಶ್ ಹೇಳಿದ್ದಾರೆ.

ಅಖಿಲೇಶ್ ಯಾದವ್ ಅವರು, ಶ್ರೀಕೃಷ್ಣ ನನ್ನ ಕನಸಿನಲ್ಲಿ ಸಮಾಜವಾದಿ ಸರ್ಕಾರ ರಚನೆಯಾಗಲಿದೆ ಎಂದು ಹೇಳಿದ್ದಾರೆ ಎಂದರು. ಇನ್ನು ಬಿಜೆಪಿಯ ಜನ ವಿಶ್ವಾಸ ಯಾತ್ರೆಗೆ ವ್ಯಂಗ್ಯವಾಡಿದ ಅಖಿಲೇಶ್, ನಾನು ಹಲವು ಸ್ಥಳಗಳ ಚಿತ್ರವನ್ನು ನೋಡಿದ್ದೇನೆ. ಬಿಜೆಪಿಯ ಜನ ವಿಶ್ವಾಸ ಯಾತ್ರೆಗಿಂತ ಚೌಮೇನ್ ಗಾಡಿಗಳು ಹೆಚ್ಚು ಜನಸಂದಣಿಯಿಂದ ಕೂಡಿವೆ ಎಂದು ಟೀಕಿಸಿದರು.

Comments are closed.