ಅಂತರಾಷ್ಟ್ರೀಯ

ಭಾರತದ 55 ಮೀನುಗಾರರು, 8 ದೋಣಿಗಳನ್ನು ವಶಪಡಿಸಿಕೊಂಡ ಶ್ರೀಲಂಕಾ ನೌಕಾಪಡೆ

Pinterest LinkedIn Tumblr

ಲರಾಮೇಶ್ವರಂ: ಶ್ರೀಲಂಕಾ ನೌಕಾ ಸಿಬ್ಬಂದಿ ತಮಿಳುನಾಡಿನ 8 ದೋಣಿಗಳ ಸಹಿತ 55 ಮೀನುಗಾರರನ್ನು ವಶಪಡಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.

(ಸಾಂದರ್ಭಿಕ ಚಿತ್ರ)

ಭಾರತ-ಶ್ರೀಲಂಕಾ ಜಲಗಡಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದ ತಮಿಳುನಾಡು ಮೂಲದ ಸುಮಾರು 55 ಮೀನುಗಾರರನ್ನು ಶ್ರೀಲಂಕಾ ನೌಕಾ ಪಡೆಯ ಸಿಬ್ಬಂದಿಗಳು ವಶಕ್ಕೆ ಪಡೆದಿದ್ದು, ಮೀನುಗಾರಿಕೆಗೆ ಬಳಸುತ್ತಿದ್ದ 8 ಬೋಟ್ ಗಳನ್ನು ಕೂಡ ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.

ಇನ್ನು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಶ್ರೀಲಂಕಾದಿಂದ 50ಕ್ಕೂ ಹೆಚ್ಚು ಮೀನುಗಾರರು ಮತ್ತು ಅವರ 8 ದೋಣಿಗಳನ್ನು ಬಿಡುಗಡೆ ಮಾಡಲು ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಕೇಂದ್ರ ಸಚಿವರು ತಕ್ಷಣವೇ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಚೆನ್ನೈನಲ್ಲಿ ಅಧಿಕೃತ ಪ್ರಕಟಣೆ ತಿಳಿಸಿದೆ.

43 ಮೀನುಗಾರರನ್ನು ಬಂಧಿಸಿ ರಾಮೇಶ್ವರಂನಿಂದ 6 ದೋಣಿಗಳನ್ನು ವಶಪಡಿಸಿಕೊಂಡ ನಂತರ, ಮಂಡಪಂ ಪ್ರದೇಶದ ಇತರೆ 12 ಮೀನುಗಾರರನ್ನು ಸಹ ಲಂಕಾ ನೌಕಾಸೇನೆ ಬಂಧಿಸಿದೆ. ಮಂಡಪಂ ಮೀನುಗಾರರ 2 ದೋಣಿಗಳನ್ನೂ ವಶಪಡಿಸಿಕೊಳ್ಳಲಾಗಿದ್ದು, ಅವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಇಲ್ಲಿನ ಮೀನುಗಾರರ ಸಂಘ ಸೋಮವಾರ (ಡಿಸೆಂಬರ್ 20) ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ಅನಿರ್ದಿಷ್ಟಾವಧಿ ಮುಷ್ಕರವನ್ನೂ ಆರಂಭಿಸುವುದಾಗಿ ಘೋಷಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಮೀನುಗಾರರು ಡಿಸೆಂಬರ್ 18ರಂದು 500ಕ್ಕೂ ಹೆಚ್ಚು ದೋಣಿಗಳಲ್ಲಿ ಇಲ್ಲಿಂದ ಹೊರಟು ಕಚ್ಚಾತೀವು ದ್ವೀಪದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಬಂಧಿಸಿದ ಬಗ್ಗೆ ಮಾಹಿತಿಯಿದೆ.

ರಾಮನಾಥಪುರ ಸಂಸದ ಕೆ.ನವಾಸ್ ಕಣಿ ಅವರು ಕೇಂದ್ರ ಸಚಿವರೊಂದಿಗೆ ಮಾತನಾಡಿ ಮೀನುಗಾರರು ಮತ್ತು ಅವರ ದೋಣಿಗಳ ಬಿಡುಗಡೆಗೆ ತಕ್ಷಣ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.

 

Comments are closed.