ಬೆಳಗಾವಿ: ಜಿಲ್ಲೆಯಲ್ಲಿ ಪುಂಡಾಟಿಕೆ ಮಾಡಿದವರನ್ನೇ ಬಂಧಿಸಲಾಗಿದ್ದು, ಹಿಂದಿನ ಸರ್ಕಾರಗಳು ಯಾವತ್ತಿಗೂ ಈ ರೀತಿಯ ಕೆಲಸವನ್ನು ಮಾಡಿರಲಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೋಮವಾರ ಹೇಳಿಕೆ ನೀಡಿದ್ದಾರೆ.

ಪ್ರಮುಖರನ್ನು ಅರೆಸ್ಟ್ ಮಾಡಿ, ನಿಯಂತ್ರಣ ಮಾಡಿಸಿದ್ದೇವೆ. ಮಹಾರಾಷ್ಟ್ರ ಸರ್ಕಾರದ ಹೋಮ್ ಸೆಕ್ರೆಟರಿ ಜೊತೆ ಮಾತನಾಡಿದ್ದೇವೆ. ನಮ್ಮ ಡಿಜಿಯವರು ಅಲ್ಲಿನ ಸೆಕ್ರೆಟರಿ ಜೊತೆ ಮಾತಾಡಿದ್ದಾರೆ. ಕನ್ನಡಿಗರ ಆಸ್ತಿ ಪಾಸ್ತಿ ರಕ್ಷಣೆ ಮಾಡಬೇಕು, ಅಲ್ಲಿನ ವಾಹನಗಳನ್ನು ರಕ್ಷಣೆ ಮಾಡಬೇಕು ಎಂದು ಹೇಳಿದ್ದೇವೆ. ಇವತ್ತು ಕೂಡ ಅವರಿಗೆ ಮಾತಾಡಲು ನಿರ್ದೇಶನ ಕೊಡುತ್ತೇನೆ. ಈ ರೀತಿ ಕಾನೂನು ಸುವ್ಯವಸ್ಥೆ ಕೈಗೆ ಎತ್ತಿಕೊಂಡರೆ, ಅತ್ಯಂತ ಬಿಗಿಯಾಗಿ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಒಂದು ನಿರ್ಣಯ ಮಾಡಿ, ಈ ರೀತಿ ಘಟನೆ ಆಗದ ರೀತಿ ಕ್ರಮ ವಹಿಸುತ್ತೇವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು “ಕರ್ನಾಟಕದಲ್ಲಿ ಪುಂಡಾಟಿಕೆ ಮಾಡಿದ ಪ್ರಮುಖರನ್ನು ಬಂಧಿಸಲಾಗಿದೆ. ನಮ್ಮ ಗೃಹ ಕಾರ್ಯದರ್ಶಿಗಳು, ಪೊಲೀಸ್ ಮಹಾನಿರ್ದೇಶಕರು ಮಹಾರಾಷ್ಟ್ರ ಸರ್ಕಾರದೊಂದಿಗೆ ಮಾತನಾಡಿ, ಅಲ್ಲಿರುವ ಕನ್ನಡಿಗರು, ಆಸ್ತಿ, ಸರ್ಕಾರಿ ವಾಹನಗಳ ರಕ್ಷಣೆಗೆ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಪುಂಡಾಟಿಕೆ ವಿರುದ್ಧ ನಿರ್ಣಾಯಕ ಕ್ರಮ ಖಚಿತ” ಎಂದಿದ್ದಾರೆ.
Comments are closed.