ಮಂಗಳೂರು: ಮಂಗಳೂರು ನೀರುಮಾರ್ಗ ಸಮೀಪದ ಪಡು ಪೋಸ್ಟ್ ಆಫೀಸ್ ಬಳಿ ಕಾರನ್ನು ಅಡ್ಡಗಟ್ಟಿ ಕಾರಿನಲ್ಲಿದ್ದ ಮಹಮ್ಮದ್ ರಿಯಾಜ್ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಐದು ಮಂದಿಯನ್ನು ಬಂಧಿಸಲಾಗಿದ್ದು, ರಿಯಾಜ್ ಮೇಲೆಯೂ 5 ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅವರು, ರಿಯಾಜ್ ಮೇಲೆ ಈ ಹಿಂದೆ ಕಮಿಷನರೇಟ್ ವ್ಯಾಪ್ತಿಯ 5 ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಪೈಕಿ ಮೂರು ವೇಶ್ಯಾವಾಟಿಕೆ ಪ್ರಕರಣಗಳಾಗಿದೆ. ಈತ ನಡೆಸುತ್ತಿದ್ದ ವೇಶ್ಯಾವಾಟಿಕೆ ಚಟುವಟಿಕೆಗಳಿಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದು, ಇದೇ ವಿಚಾರಕ್ಕೆ ಸ್ಥಳೀಯ ಯುವಕರು ಮತ್ತು ರಿಯಾಜ್ ಮಧ್ಯೆ ಸಂಘರ್ಷ ನಡೆದಿದೆ ಎಂದಿದ್ದಾರೆ.
ಇನ್ನು ಹಲ್ಲೆಗೊಳಗಾದ ಆರೋಪಿ ರಿಯಾಜ್ ಮಂಡ್ಯ, ಹಾಸನ, ಮಂಗಳೂರು ಇತರೆಡೆಗಳಿಂದ ಹೆಣ್ಣುಮಕ್ಕಳನ್ನು ಕರೆಸಿ ದಂಧೆ ಮಾಡುತ್ತಿದ್ದ. ಇದೇ ವಿಚಾರದಲ್ಲಿ ಹಲ್ಲೆ ನಡೆಸಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಸಂತ್ರಸ್ತನ ಮೇಲೆ ಹಲವು ಪ್ರಕರಣಗಳು ಬೆಳಕಿಗೆ ಬಂದಿದೆ. ಮಧ್ಯವರ್ತಿ ಕೆಲಸ, ಮನೆ ಬಾಡಿಗೆ, ಲಾಡ್ಜ್ ಬಾಡಿಗೆಯ ಸಮಗ್ರ ತನಿಖೆ ನಡೆಸಲಾಗುತ್ತದೆ. ಈ ಬಗ್ಗೆ ಕದ್ರಿ ಠಾಣೆಯಲ್ಲಿ ದಾಖಲಾದ ಪ್ರಕರಣದ ಸಮಗ್ರ ತನಿಖೆ ಆಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ರಿಯಾಜ್ ವೇಶ್ಯಾವಾಟಿಕೆ ದಂಧೆಯಲ್ಲೇ ತೊಡಗಿದ್ದು, ಈ ಕುರಿತಾಗಿ ಮಹಿಳೆಯೊಬ್ಬರ ಜೊತೆ ಡೀಲ್ ಕುದುರಿಸುವ ಆಡಿಯೋವೊಂದು ವೈರಲ್ ಆಗಿದೆ.
Comments are closed.