ಕರಾವಳಿ

ಮಂಗಳೂರು: 8 ವರ್ಷದ ಬಾಲಕಿಯ ಹತ್ಯೆ; 20 ಮಂದಿ ಪೊಲೀಸ್ ವಶಕ್ಕೆ

Pinterest LinkedIn Tumblr

ಮಂಗಳೂರು: ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯ ಪರಾರಿ ಸಮೀಪದ ರಾಜ್‌ ಟೈಲ್ಸ್‌‌‌‌ ಹೆಂಚಿನ ಕಾರ್ಖಾನೆಯಲ್ಲಿ ಸಮೀಪದ ಮೋರಿಯಲ್ಲಿ 8 ವರ್ಷ ಬಾಲಕಿಯ ಮೃತದೇಹ ಪತ್ತೆಯಾಗಿರುವ ಪ್ರಕರಣದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದು ಉತ್ತರ ಭಾರತದ 20 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಭಾನುವಾರ ಕಾರ್ಖಾನೆಗೆ ರಜೆ ಇದ್ದುದರಿಂದ ಕಾರ್ಮಿಕರು ಅಲ್ಲೇ ವಾಸವಾಗಿದ್ದರು. ಆ ವೇಳೆ ಬಾಲಕಿಯನ್ನು ಅಪಹರಿಸಿ ಕೊಲೆಗೈದಿರುವವ ಸಾಧ್ಯತೆ ಇದೆ ಎನ್ನಲಾಗಿದೆ.

ಕಾರ್ಖಾನೆಯನ್ನು ಕೇರಳ ಮೂಲದ ವ್ಯಕ್ತಿಗಳು ನಡೆಸುತ್ತಿದ್ದು ಇಲ್ಲಿ ಸುಮಾರು 25 ಮಂದಿ ದುಡಿಯುತ್ತಿದ್ದಾರೆ. ಬಾಲಕಿ ನಾಪತ್ತೆಯಾಗಿರುವುದು ಸಂಜೆ 4 ಗಂಟೆ ವೇಳೆಗೆ ಮನೆಮಂದಿಗೆ ತಿಳಿದುಬಂದಿತ್ತು.6 ಗಂಟೆ ವೇಳೆಗೆ ಮೃತದೇಹ ಪತ್ತೆಯಾಗಿದೆ. ಪೊಲೀಸರು ಸ್ಥಳೀಯವಾಗಿ ಸಿಸಿಟಿವಿ ಫೂಟೇಜ್ ಪರಿಶೀಲನೆ ನಡೆಸುತ್ತಿದ್ದಾರೆ.

ಮರಣೋತ್ತರ ಪರೀಕ್ಷೆ ವರದಿಗೆ ಪೊಲೀಸರು ಕಾಯುತ್ತಿದ್ದಾರೆ.

Comments are closed.