ಕರಾವಳಿ

ಕರಾವಳಿಯಲ್ಲಿ ನಿಲ್ಲದ ಮಳೆ ಅಬ್ಬರ- ರೈತರು‌ ಕಂಗಾಲು; ಜಾತ್ರೋತ್ಸವಗಳಿಗೆ ವರುಣಾಘಾತ..!

Pinterest LinkedIn Tumblr

ಉಡುಪಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಕರಾವಳಿಯ ವಿವಿಧೆಡೆ ಭಾರೀ ಮಳೆಯಾಗಿದೆ.

ಉಡುಪಿ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿದ್ದು ಕುಂದಾಪುರ, ಬೈಂದೂರು ಭಾಗದ ಹಲವೆಡೆ ಶನಿವಾರ ಉತ್ತಮ ಮಳೆಯಾಗಿದೆ. ಕುಂದಾಪುರ, ಕೋಟೇಶ್ವರ, ತೆಕ್ಕಟ್ಟೆ, ಬಸ್ರೂರು, ಹಾಲಾಡಿ, ಸಿದ್ದಾಪುರ, ಬೈಂದೂರು, ಮರವಂತೆ ಮತ್ತಿತರ ಭಾಗಗಳಲ್ಲಿ ವ್ಯಾಪಕ ಮಳೆಯಾಗಿದೆ.

ಭತ್ತ ಕಟಾವು ಆಗದಿರುವ ಭಾಗಗಳಲ್ಲಿ ಮತ್ತೆ ಮಳೆಯಿಂದಾಗಿ ತೊಂದರೆಯಾಗಿದ್ದು, ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಅಲ್ಲದೆ ಶುಕ್ರವಾರದಿಂದ ಮೊದಲ್ಘೊಂಡು ರಥೋತ್ಸವಗಳು ನಡೆಯಿತ್ತಿದೆ. ಕೋಟೇಶ್ವರ ಹಾಗೂ ಉಪ್ಪುಂದದಲ್ಲಿ ಕೊಡಿ ಹಬ್ಬ ನಡೆಯುತ್ತಿದ್ದು ಜನರು ವಿರಳವಾಗಿದ್ದಾರೆ. ಮಳೆಯಿಂದಾಗಿ ವ್ಯಾಪಾರಸ್ಥರಿಗೆ ವ್ಯವಹಾರ ಇಲ್ಲದಾಗಿದ್ದು ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.

ದಕ್ಷಿಣ ಕನ್ನಡ, ಕಾಸರಗೋಡು ಸಹಿತ ಕರಾವಳಿ ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ಎಲ್ಲೋ ಅಲರ್ಟ್‌ ಘೋಷಿಸಿದೆ.

Comments are closed.