ಪುತ್ತೂರು: ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಾದ ಬಳಿಕ ತಲೆಮರೆಸಿಕೊಂಡಿರುವ ರಾಜು ಹೊಸ್ಮಠ ಎಂಬಾತ ಪರಾರಿಯಾಗಲು ಸಹಕಾರ ನೀಡಿರುವ ಆರೋಪದಡಿಯಲ್ಲಿ ಉಜಿರೆಯ ಗಣೇಶ್ ಮತ್ತು ಮೂಡಿಗೆರೆಯ ಲಿಂಗಪ್ಪ ಭಾನುವಾರ ಬಂಧಿಸಿದ್ದಾರೆ. ತನ್ನದೇ ಸಮುದಾಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ರಾಜು ಹೊಸ್ಮಠ ವಿರುದ್ಧ ಕೆಲವು ದಿನಗಳ ಹಿಂದೆ ಪೊಕ್ಸೊ ಕೇಸು ದಾಖಲಾಗಿತ್ತು.

ಈ ವಿಚಾರ ತಿಳಿಯುತ್ತಿದ್ದಂತೆಯೇ ಆತ ತಲೆಮರೆಸಿಕೊಂಡಿದ್ದರು. ಆತನನ್ನು ಮೂಡಿಗೆರೆಗೆ ಕಾರಿನಲ್ಲಿ ಕರೆದುಕೊಂಡು ಹೋಗಿ ಬಿಡಲಾಗಿದೆ ಎಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಗೆ ಪರಾರಿಯಾಗಲು ಸಹಕಾರ ನೀಡಿದ ಕಾರಣಕ್ಕಾಗಿ ಗಣೇಶ್ ಹಾಗೂ ಲಿಂಗಪ್ಪ ಎಂಬವರನ್ನು ಬಂಧಿಸಲಾಗಿದೆ.
ಸದ್ಯ ರಾಜು ಹೊಸ್ಮಠ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
Comments are closed.