ಕರಾವಳಿ

ಕಾರು ಶೆಡ್ಡಿನಲ್ಲಿ ಸ್ಫೋಟ ಪ್ರಕರಣ: ಬೆಂಕಿಯಿಂದ ಸುಟ್ಟು ಗಂಭೀರ ಗಾಯಗೊಂಡಿದ್ದ ಪಡುಮುಂಡು ದಿನೇಶ್ ಶೆಟ್ಟಿ ನಿಧನ

Pinterest LinkedIn Tumblr

ಉಡುಪಿ: ಇತ್ತೀಚಿಗೆ ಮನೆಯ ಕಾರ್ ಪಾರ್ಕಿಂಗ್ ಶೆಡ್ಡಿನೊಳಗೆ ಸಂಭವಿಸಿದ್ದ ಸ್ಪೋಟ ಪ್ರಕರಣದಲ್ಲಿ ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಪತಿ ಹಾಗೂ ಪತ್ನಿಯ ಪೈಕಿ ಪತಿ ಬೇಳೂರು ಪಡುಮುಂಡು ದನ್ಯಾಡಿ ಹೆಬ್ಬಾಗಿಲು ಮನೆ ನಿವಾಸಿ ದಿನೇಶ್ ಶೆಟ್ಟಿ (46) ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಪತ್ನಿ ವಸಂತಿ ಶೆಟ್ಟಿ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ದಿನೇಶ್ ಶೆಟ್ಟಿ ವಾಸ್ತವ್ಯದ ಮನೆಯ ಕಾರ್ ಶೆಡ್‌ನಲ್ಲಿ ಯಾವುದೋ ಸ್ಪೋಟಕ ವಸ್ತು ಸಿಡಿದು ಬೆಂಕಿ ಅನಾಹುತವಾಗಿದ್ದು ದಿನೇಶ ಶೆಟ್ಟಿಯವರ ದೇಹ ಬೆಂಕಿಯಿಂದ ಭಾಗಶಃ ಸುಟ್ಟು ಹೋಗಿತ್ತು. ಸ್ಫೋಟದ ರಭಸಕ್ಕೆ ಮನೆಯ ಕಾರ್ ಸಿಟೌಟ್ ನ ಮೇಲ್ಚಾವಣಿಯಲ್ಲಿದ್ದ ಲೈಟ್ ಹಾಗೂ ಗೋಡೆಯಲ್ಲಿದ್ದ ಲೈಟ್ ಮತ್ತು ಸ್ವೀಚ್‌ಗಳು ಸುಟ್ಟಿದ್ದು, ಕಾರ್ ಶೆಡ್‌ಗೆ ಹೊಂದಿಕೊಂಡಿರುವ ಅಡುಗೆ ಮನೆಯ ಕಿಟಕಿಯ ಗಾಜು ಬಿರುಕು ಬಿಟ್ಟಿತ್ತು. ಕಾರ್ ಶೆಡ್‌ನಲ್ಲಿದ್ದ ಸ್ಕೂಟಿಯು ಭಾಗಶ: ಸುಟ್ಟು ಹೋಗಿತ್ತು. ಅಲ್ಲದೆ ಕಾರಿನ ಹೊರಭಾಗ ಸುಟ್ಟು ಹೋಗಿತ್ತು. ಶನಿವಾರ ಈ ಘಟನೆ ನಡೆದಿದ್ದು ದಿನೇಶ ಶೆಟ್ಟಿ ಹಾಗೂ ಅವರ ಪತ್ನಿ ವಸಂತಿ ಶೆಟ್ಟಿಯವರಿಗೆ ತೀವ್ರ ತರದ ಸುಟ್ಟ ಗಾಯಗಳಾಗಿ ಚಿಕಿತ್ಸೆಗಾಗಿ ಕೆ.ಎಮ್.ಸಿ. ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು. ಜೀವನ್ಮರಣ ಹೋರಾಟದಲ್ಲಿ ಚಿಕಿತ್ಸೆ ಫಲ ನೀಡದೆ ದಿನೇಶ ಶೆಟ್ಟಿ ಬುಧವಾರ ಮೃತಪಟ್ಟಿದ್ದಾರೆ.

ಬೇಳೂರು ದೇಲಟ್ಟು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದ ದಿನೇಶ್ ಶೆಟ್ಟಿ ಸಾಕಷ್ಟು ಸಮಾಜಮುಖಿ ಕಾರ್ಯದಲ್ಲಿ ತೋಡಗಿಕೊಂಡಿದ್ದರು. ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Comments are closed.