ಮಂಗಳೂರು: ಕಳೆದ ತಿಂಗಳು ಮಂಗಳೂರಿನ ಶಿಕ್ಷಕರ ತರಬೇತಿ ಕೇಂದ್ರದೊಳಗೆ ನುಗ್ಗಿ ಮೂವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಆಸ್ಪತ್ರೆಯ ಜೈಲು ವಾರ್ಡಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಕುಂದಾಪುರ ಮೂಲದ ನವೀನ್ ಶೆಟ್ಟಿ (31) ಆತ್ಮಹತ್ಯೆಗೆ ಯತ್ನಿಸಿದಾತ.

ವೆನ್ ಲಾಕ್ ಆಸ್ಪತ್ರೆಯ ಜೈಲ್ ವಾರ್ಡ್ ನಲ್ಲಿ ಬೆಡ್ ಶೀಟ್ ಬಳಸಿ ಕಿಟಕಿಗೆ ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಎರಡು ದಿನಗಳ ಹಿಂದೆ ಆರೋಪಿಯನ್ನು ಮಾನಸಿಕ ಸಮಸ್ಯೆ ಹಿನ್ನೆಲೆ ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು ಆತ ನಿನ್ನೆ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ.
ಆರೋಪಿ ನವೀನ್ ಕುಂದಾಪುರ ನ್ಯಾಯಾಲಯದಲ್ಲಿ ಅಟೆಂಡರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ. ವೈಯುಕ್ತಿಕ ದ್ವೇಷದ ಕಾರಣದಿಂದಾಗಿ ಸರಕಾರಿ ಕಚೇರಿಗೆ ನುಗ್ಗಿ ಮೂವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.
Comments are closed.