ಕರಾವಳಿ

Breaking News-ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧೀಕೃತ ಟ್ವೀಟರ್ ಖಾತೆ ಹ್ಯಾಕ್..!?

Pinterest LinkedIn Tumblr

ಉಡುಪಿ: ಸಮಾಜ ಕಲ್ಯಾಣ ಮತ್ತು‌ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಅಧೀಕೃತ ಟ್ವೀಟರ್ ಖಾತೆ ಹ್ಯಾಕ್ ಆಗಿದೆ ಎನ್ನಾಲಾಗಿದೆ.

ತನ್ನ ಟ್ವೀಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ಸಚಿವರೆ ಖುದ್ದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇಂದು ಸಚಿವರ ಟ್ವೀಟರ್ ಖಾತೆ ಹ್ಯಾಕ್ ಆಗಿದೆ ಎನ್ನಲಾಗಿದ್ದು ದೂರು ನೀಡಲಾಗಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಸಚಿವ ಕೋಟ, “ಆತ್ಮೀಯರೇ,
ನನ್ನ ಅಧಿಕೃತ ಟ್ವಿಟರ್ ಖಾತೆಯು ಹ್ಯಾಕ್ ಆಗಿದ್ದು ಈಗಾಗಲೇ ಪರಿಶೀಲನೆಗೆ ಮನವಿ ಮಾಡಲಾಗಿದೆ. ನಾನು ಅಧಿಕೃತವಾಗಿ ಘೋಷಿಸುವವರೆಗೂ ಟ್ವಿಟರ್ ಮೂಲಕ ಬರುವ ಯಾವುದೇ ಸಂದೇಶಗಳನ್ನು ಪರಿಗಣಿಸಬಾರದೆಂದು ಮನವಿ ಮಾಡುತ್ತೇನೆ” ಎಂದಿದ್ದಾರೆ.

Comments are closed.