ಕರಾವಳಿ

ಅಕ್ರಮ ಮರಳುಗಾರಿಕೆ ಅಡ್ಡೆಗೆ ಮಾರುವೇಷದಲ್ಲಿ ಪೊಲೀಸರ ದಾಳಿ; ಎರಡು ಟಿಪ್ಪರ್ ಹಾಗೂ ದೋಣಿ ವಶಕ್ಕೆ

Pinterest LinkedIn Tumblr

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಎಎಸ್ಪಿ ಮತ್ತು ಅವರ ತಂಡ ಇಂದು ಬೆಳಗ್ಗಿನ ಜಾವ ಖಚಿತ ಮಾಹಿತಿಯ ಮೇರೆಗೆ ಮಾರುವೇಷದಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಅಡ್ಡೆಗೆ ದಾಳಿ ನಡೆಸಿದ ಘಟನೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಮುಂಡಾಜೆ ಗ್ರಾಮದ ಹೊಸಕಾಪು ಎಂಬಲ್ಲಿ ನಡೆದಿದೆ.

ದಾಳಿ ವೇಳೆ ಮರಳುಗಾರಿಕೆಗೆ ಬಳಸುತ್ತಿದ್ದ ಎರಡು ದೋಣಿ ಹಾಗೂ ಎರಡು ಟಿಪ್ಪರ್ ವಾಹನವನ್ನು ವಶಪಡಿಸಿಕೊಂಡು ಧರ್ಮಸ್ಥಳ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ದಾಳಿಯ ವೇಳೆ ವಶಪಡಿಸಿಕೊಂಡ ವಾಹನಗಳು ಉಜಿರೆ ನಿವಾಸಿ ಸುನಿಲ್ ಮತ್ತು ಸೋಮಂದಡ್ಕದ ನಿವಾಸಿ ರಾಧಾಕೃಷ್ಣ ಎನ್ನುವವರಾದ್ದಾಗಿದೆ.

ಎರಡು ಕಡೆ ದಾಳಿ ನಡೆದಿದ್ದು, ಈ ವೇಳೆ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದೆ.

Comments are closed.