ಶಿವಮೊಗ್ಗ: ಪುನೀತ್ ರಾಜ್ಕುಮಾರ್ ಅಕಾಲಿಕ ನಿಧನ ಹಿನ್ನೆಲೆಯಲ್ಲಿ ಶಿವಮೊಗ್ಗದ ರಸ್ತೆಯೊಂದಕ್ಕೆ ಅಭಿಮಾನಿಗಳು ಅವರ ಹೆಸರನ್ನೇ ಇಟ್ಟಿದ್ದಾರೆ.

ನಗರದ ಲಕ್ಷ್ಮಿ ಟಾಕೀಸ್ ಬಳಿಯ ಚಾನಲ್ ಪಕ್ಕದ ಎರಡು ಕಿ.ಮೀ ಉದ್ದದ ರಸ್ತೆಗೆ ‘ಪುನೀತ್ ರಾಜ್ಕುಮಾರ್ ರಸ್ತೆ’ ಎಂದು ಸ್ಥಳೀಯರು ಹಾಗೂ ಅಭಿಮಾನಿಗಳು ನಾಮಕರಣ ಮಾಡಿ, ಬೋರ್ಡ್ ಹಾಕಿದ್ದಾರೆ.ಪುನೀತ್ ರಾಜ್ಕುಮಾರ್ ರಸ್ತೆಯ ಹೆಸರನ್ನು ಅಧಿಕೃತಗೊಳಿಸುವಂತೆ ಶಿವಮೊಗ್ಗ ಮಹಾನಗರ ಪಾಲಿಕೆಗೆ ಮನವಿ ಕೂಡ ಮಾಡಿದ್ದಾರೆ
ಡಾ. ರಾಜ್ ಕುಮಾರ್ ಸ್ಮರಣಾರ್ಥವಾಗಿ ಅಭಿಮಾನಿಗಳ ಸಂಘ ಅವರ ನೆನಪಿಗೋಸ್ಕರ ಬೆಂಗಳೂರಿನಲ್ಲಿ ಡಾ. ರಾಜ್ ಕುಮಾರ್ ರಸ್ತೆ ಎಂದು ಹೆಸರಿಟ್ಟಿರೋದು ಗೊತ್ತೇ ಇದೆ. ಇದಲ್ಲದೆ ಕೆಲವು ಹಿರಿಯ ಕಲಾವಿದರ ಹೆಸರುಗಳನ್ನೂ ರಸ್ತೆಗಳಿಗೆ ಹೆಸರಿಡಲಾಗಿದೆ. ಇಂತಹ ಗೌರವಗಳ ಸಾಲಿನಲ್ಲಿ ನಟ ಪುನೀತ್ ರಾಜ್ ಕುಮಾರ್ ಅವರ ಹೆಸರೂ ಕೇಳಿಬರುತ್ತಿದೆ.
ನಟಸಾರ್ವಭೌಮನ ಅಭಿಮಾನಿಗಳು ಈಗಾಗಲೇ ಪುನೀತ್ ಅವರ ಹೆಸರನ್ನು ಸುಮಾರು ಒಂದು ಕಿ.ಮೀ ಉದ್ದದ ರಸ್ತೆಗೆ ನಾಮಕರಣ ಮಾಡಲು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ. ಈಗಾಗಲೇ ಕಳೆದ ನವೆಂಬರ್ 1 ರಂದೇ ಶಿವಮೊಗ್ಗದ ಆಯನೂರ್ ಗೇಟ್ ನಿಂದ ಲಕ್ಷ್ಮಿ ಚಲನಚಿತ್ರ ಮಂದಿರದವರೆಗಿನ ರಸ್ತೆಗೆ ಪುನೀತ್ ರಾಜ್ ಕುಮಾರ್ ಹೆಸರಿಡಲಾಗಿದೆ.
ಈ ಬಗ್ಗೆ ಮಾತನಾಡಿದ ಮೇಯರ್ ಸುನೀತಾ ಅಣ್ಣಪ್ಪ, ಪುನೀತ್ ಅವರ ಅಭಿಮಾನಿಗಳು ಸರ್ಕಾರದ ಮುಂದೆ ಈ ಬೇಡಿಕೆಯಿಟ್ಟಿದ್ದರು. ನಾಮಕರಣ ಅಧಿಕೃತಗೊಳಿಸುವ ಬಗ್ಗೆ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಗಿದೆ, ಇನ್ನು ಸರ್ಕಾರ ಅಧಿಕೃತಗೊಳಿಸುವುದು ಬಾಕಿ ಇದೆ ಎಂದು ತಿಳಿಸಿದ್ದಾರೆ.
Comments are closed.