ಹೈದರಾಬಾದ್: ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟಿರುವ ಘಟನೆ ಕೀಸರ ತಾಲೂಕಿನ ಯಾದ್ಗಾರಪಲ್ಲಿಯ ಔಟರ್ ರಿಂಗ್ ರಸ್ತೆಯಲ್ಲಿ ನಡೆದಿದೆ.

ಹೈದರಾಬಾದ್ ಸೈಬರ್ ಕ್ರೈಂ ವಿಭಾಗದ ಎಸಿಪಿ ಕೆವಿಎಂ ಪ್ರಸಾದ್ ಗಂಭೀರವಾಗಿ ಗಾಯಗೊಂಡಿದ್ದು ಅವರ ಪತ್ನಿ ಶಂಕರಮ್ಮ(48), ಪ್ರಸಾದ್ ಅವರ ತಂಗಿ ರೇಣುಕಾ(42)ಮತ್ತು ಬಾವ ಕೆ.ಬಾಲಕೃಷ್ಣ(48) ಮೃತಪಟ್ಟಿದ್ದಾರೆ. ಎಸಿಪಿ ಕೆವಿಎಂ ಪ್ರಸಾದ್ ಗಂಭೀರ ಗಾಯಗೊಂಡು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.
ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Comments are closed.