ಕುಂದಾಪುರ: ದಲಿತ ಸಂಘರ್ಷ ಸಮಿತಿ ಭೀಮ ಘರ್ಜನೆ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ‘ಬುದ್ದನ ಜಡ್ಡಿಗೆ ನಮ್ಮ ನಡಿಗೆ, ಮಹಿಷಾ ದಸರಾ’ ಕಾರ್ಯಕ್ರಮ ತಾಲೂಕಿನ ನೇರಳಕಟ್ಟೆ ಸಮೀಪದ ರ್ಕುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬುದ್ದನ ಜಡ್ಡಿನಲ್ಲಿ ನೆರವೇರಿತು.

ಐತಿಹಾಸಿಕ ಕುರುಹುಗಳಾದ ದಮ್ಮಚಕ್ರ, ಜಿಂಕೆ, ಅಶ್ವ ಪತ್ತೆಯಾದ ಬುದ್ದನ ಜಡ್ಡುವಿನ ಆ ಸ್ಥಳದಲ್ಲೆ ಅದ್ದೂರಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಮೊದಲಿಗೆ ಅಂಬೇಡ್ಕರ್ ಭಾವ ಚಿತ್ರಕ್ಕೆ ಬೌದ್ಧ ಉಪನ್ಯಾಸಕಾರಾದ ನಾರಾಯಣ ಮಣೂರು ಹಾಗೂ ಗೋಪಾಲ ಕೃಷ್ಣರವರು ಮಾಲಾರ್ಪಾಣೆ ಮಾಡಿದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಉದಯ ಕುಮಾರ್ ತಲ್ಲೂರು ಪ್ರಾಸ್ತಾವಿಕ ಮಾತನಾಡಿ ಬುದ್ದನ ಜಡ್ಡಿನ ಇತಿಹಾಸಕ್ಕೆ ಚಾಲನೆ ನೀಡಿದರು.
ಬೌದ್ಧ ಧರ್ಮ ಉಪನ್ಯಾಸಕರಾದ ಶಂಭು ಮಾಸ್ತಾರ್ ಹಾಗೂ ಗೋಪಾಲಕೃಷ್ಣ ಕುಂದಾಪುರ ರವರು ಬುದ್ಧ ವಂದನೆ ಮಾಡಿ ಪಂಚ ಶೀಲಾ ಮತ್ತು ತ್ರೀಸರಣ ಬೋದಿಸಿದರು. ಹಾಗೆ ಬೌದ್ಧ ಉಪಸಾಕರಾದ ನಾರಾಯಣ ಮಣೂರವರು ಬುದ್ದ ಚೆರಿತೆ ಹಾಗೂ ಅಂಬೇಡ್ಕರ್ ಜೀವನ ಚರಿತ್ರೆಯನ್ನ ವಿವರಿಸಿದರು.ವಸಂತ ವಂಡ್ಸೆ ಬುದ್ದ ಗೀತೆಯನ್ನ ಪ್ರಸ್ತುತ ಪಡಿಸಿದರು,
ಕಾರ್ಯಕ್ರಮದಲ್ಲಿ ಸಂಘಟನೆಯ ಮುಖಂಡರುಗಳಾದ ಕೆ.ಎಸ್ ವಿಜಯ್, ಮಂಜುನಾಥ ಗುಡ್ಡೆಯಂಗಡಿ, ರಾಮ ಮೈಯಾಡಿ, ರಮೇಶ್ ಶೀರೂರು ರಾಘವೇಂದ್ರ ಶೀರೂರು, ಸುರೇಶ್ ಬಾಬು, ರಾಜು ಮಾಸ್ಟರ್ ಬೀಜಾಡಿ, ಮಾಜಿ ಗ್ರಾ.ಪಂ ಸದಸ್ಯರಾದ ಮಂಜುನಾಥ ಬುದ್ದನ ಜಡ್ಡು, ಸುಖಾನಂದ ತಲ್ಲೂರು, ಸಚಿನ್ ಎಸ್ ಕುಂದಾಪುರ, ಸತ್ಯ ನಾರಾಯಣ ಬೆಳ್ಳಾಲ, ಸಂಜೀವ ಕೊಡ್ಲಾಡಿ, ಅರುಣಾ ಕೊಡ್ಲಾಡಿ, ರಾಮ ಬೆಳ್ಳಾಲ, ಚಂದ್ರಿಕಾ ಬೆಳ್ಳಾಲ, ಜ್ಯೋತಿ ತಲ್ಲೂರು, ಅರುಣ್ ಹಾಗೂ ಉದಯ್ ತಲ್ಲೂರು ಇತರರು ಉಪಸ್ಥಿತರಿದ್ದರು. ಚಂದ್ರಮ ತಲ್ಲೂರು ವಂದಿಸಿದರು.
Comments are closed.