ಬೆಂಗಳೂರು: ನಟ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಕೋಟಿಗೊಬ್ಬ-3 ಚಿತ್ರದ ಇಂದು (ಅ.14 ಗುರುವಾರ) ತೆರೆಕಾಣಬೇಕಿದ್ದ ಚಿತ್ರ ಕಾರಣಾಂತರದಿಂದ ತೆರೆಕಂಡಿಲ್ಲ. ಇದರಿಂದ ಕಿಚ್ಚ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ.

ಕೋವಿಡ್ ಲಾಕ್ ಡೌನ್ ಬಳಿಕ ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಪ್ರೇಕ್ಷಕರ ಸಾಮರ್ಥ್ಯದೊಂದಿಗೆ ಚಿತ್ರಮಂದಿರ ತೆರೆಯಲು ಅನುಮತಿ ದೊರೆತಿದೆ
ಈ ಹಿನ್ನೆಲೆ ತಮ್ಮ ನೆಚ್ಚಿನ ನಟ ಚಿತ್ರ ನೋಡಲು ಬಂದಿದ್ದ ಸುದೀಪ್ ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಿದೆ.
ಇಂದು ಬೆಳಗ್ಗೆ ರಾಜ್ಯದ ಹಲವಾರು ಥಿಯೇಟರ್ಗಳಲ್ಲಿ ಚಿತ್ರ ಬಿಡುಗಡೆಯಾಗುತ್ತದೆ ಎಂದು ಸಾವಿರಾರು ಅಭಿಮಾನಿಗಳು ಥಿಯೇಟರ್ ನತ್ತ ಬಂದಿದ್ದರು. ಬೆಳಗ್ಗೆ 7 ಗಂಟೆಯ ಪ್ರದರ್ಶನಕ್ಕೆ ನಿನ್ನೆಯೇ ಟಿಕೆಟ್ಗಳು ಸೋಲ್ಡ್ಔಟ್ ಆಗಿದ್ದವು. ತಾಂತ್ರಿಕ ಕಾರಣಗಳಿಂದಾಗಿ ಚಿತ್ರ ಬಿಡುಗಡೆ ಸಾಧ್ಯವಾಗಲಿಲ್ಲ. ಬಳಿಕ 10 ಗಂಟೆಗೆ ಪ್ರದರ್ಶನ ಏರ್ಪಡಿಸುವುದಾಗಿ ಚಿತ್ರ ತಂಡ ಸಮಾಜಾಯಿಷಿ ಮಾಡಿತು. ಆದರೆ ಬಹಳ ನಿರೀಕ್ಷೆಯಿಂದ ಥಿಯೇಟರ್ಗೆ ಬಂದಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದ್ದು, ಕೆಲವು ಕಡೆ ಪ್ರತಿಭಟನೆ ನಡೆಸಿದ್ದಾರೆ.
ಆರಂಭದಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಚಿತ್ರಬಿಡುಗಡೆ ತಡವಾಗುತ್ತಿದೆ ಎಂದು ಸಬೂಬು ಹೇಳಿತ್ತು ಚಿತ್ರತಂಡ. ಬಳಿಕ ವಿತರಕರು ಮೋಸ ಮಾಡಿದ್ದಾರೆಂದು ಹೇಳಿದೆ.
Comments are closed.