ಉಡುಪಿ: ಕಾರ್ಕಳ ಪೇಟೆಯ ಮುಖ್ಯ ರಸ್ತೆಯಲ್ಲಿಯೇ ಹೊಂಡಗಳು ಬಿದ್ದು, ವಾಹನಗಳು ಸಂಚರಿಸಲು ಹರಸಾಹಸ ಪಡುತ್ತಿದ್ದರೂ, ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಮಾತ್ರ ಮೌನವಾಗಿದ್ದಾರೆ. ಇದನ್ನು ನೋಡಿದ ಓರ್ವರು ಸಹಿಸಲಾರದೆ ಬಾಳೆಗಿಡ ನೆಟ್ಟು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ನಾಯಕರಿಂದ ವೀಡಿಯೊ ವೈರಲ್..
ಕಾರ್ಕಳದ ರಸ್ತೆ ಹೊಂಡಗಳಲ್ಲಿ ಯುವ ಕಾಂಗ್ರೇಸ್ ಕಾರ್ಯಕರ್ತರು ಬೆಂಡೆ ಗಿಡ ನೆಟ್ಟಾಗ ಹಾಸ್ಯ ಮಾಡಿದ ಬಿಜೆಪಿ ಯುವ ಮೋರ್ಚಾ, ರೈತ ಮೋರ್ಚಾದವರು ಎಲ್ಲಿ ಹೋದರು, ಇದೀಗ ತಮ್ಮದೆ ಬಿಜೆಪಿ ಪಕ್ಷದ ಕಾರ್ಯಕರ್ತ ಬಾಳೆ ಗಿಡ ನೆಟ್ಟಿದ್ದಾನೆ, ಗೊನೆ ಬಂದ ಮೇಲೆ ಕಿತ್ತುಕೊಂಡು ಹೋಗಿ ಎಂದು ಆಡಳಿತ ಪಕ್ಷಕ್ಕೆ ವ್ಯಂಗ್ಯವಾಡಿದ್ದಾರೆ.
Comments are closed.