ಕರ್ನಾಟಕ

ಕೈ ಬಳಸದೇ ಬಾಯಲ್ಲಿ‌ ಕುಂಚ ಹಿಡಿದು ಸಿಎಂ ಚಿತ್ರ ಬಿಡಿಸಿದ ಕಲಾವಿದನ ಪ್ರತಿಭೆಗೆ ಬೊಮ್ಮಾಯಿ ಫಿದಾ..!

Pinterest LinkedIn Tumblr

ದಾವಣಗೆರೆ: ಕೈ ಬಳಸದೇ ಬಾಯಿಯಲ್ಲಿ ಕುಂಚವನ್ನು ಹಿಡಿದು ಚಿತ್ರ ಬಿಡಿಸುವ ಹರಿಹರದ ಜಯಕುಮಾರ್ ತಾವು ಬಿಡಿಸಿದ್ದ ಮುಖ್ಯಮಂತ್ರಿ ಬಸವರಾಜ ಎಸ್.ಬೊಮ್ಮಾಯಿ ಅವರ ಚಿತ್ರವನ್ನು ಇಂದು ದಾವಣಗೆರೆಯಲ್ಲಿ ಅಭಿಮಾನಪೂರ್ವಕವಾಗಿ ಮುಖ್ಯಮಂತ್ರಿಗಳಿಗೆ ಕಾಣಿಕೆಯಾಗಿ ನೀಡಿದರು.

ಆರೋಗ್ಯ ಸಚಿವ ಡಾ|| ಕೆ.ಸುಧಾಕರ್, ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮತ್ತಿತರರು ಉಪಸ್ಥಿತರಿದ್ದರು.

ಹರಿಹರದ ಜಯಕುಮಾರ್ ಪ್ರೀತಿಯಿಂದ ನೀಡಿದ ಕಾಣಿಕೆಯನ್ನು ಸ್ವೀಕರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಸದಿಂದ ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Comments are closed.