ಬಳ್ಳಾರಿ: ಸಾಮಾನ್ಯವಾಗಿ ಬರ್ತ್ಡೇ ದಿನ ಕೇಕ್ ಕತ್ತರಿಸುವುದು. ಕೆಲವೆಡೆ ಪಟಾಕಿ ಸಿಡಿಸುವುದು ವಾಡಿಕೆ. ಅಲ್ಲದೆ ರಕ್ತದಾನ, ಅನ್ನದಾನ ಮೊದಲಾದ ಸೇವಾ ಚಟುವಟಿಕೆ ಕೂಡ ಮಾಡಲಾಗುತ್ತದೆ. ಆದರೆ ಕಿಚ್ಚನ ಹುಟ್ಟು ಹಬ್ಬದಂದು ಕೆಲ ಅಭಿಮಾನಿಗಳ ಹುಚ್ಚಾಟ ಮೆರೆದಿದ್ದರು.

ಕಿಚ್ಚ ಸುದೀಪ್ ಹುಟ್ಟುಹಬ್ಬದ ದಿನವಾದ ಗುರುವಾರ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಬಂಡ್ರಿಯಲ್ಲಿ ಸಾರ್ವಜನಿಕವಾಗಿ ಕೋಣ ಬಲಿಕೊಟ್ಟಿದ್ದಾರೆ.
ಸುದೀಪ್ ಫ್ಯಾನ್ಸ್ ಅಭಿಮಾನದ ಹೆಸರಲ್ಲಿ ಪ್ರಾಣಿವಧೆ ಮಾಡಿದ್ದಾರೆ. ಈ ಬಗ್ಗೆ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ, ಇಂತಹ ಕೆಲಸ ಮಾಡಬೇಡಿ. ಇದರಿಂದ ಮನಸ್ಸಿಗೆ ನೋವಾಗಿದೆ ಎಂದು ವಿಶೇಷ ಮನವಿ ಮಾಡಿದ್ದಾರೆ. ಅಭಿಮಾನದ ಹೆಸರಲ್ಲಿ ಪ್ರಾಣಿ ಹಿಂಸೆ ಮಾಡಿ ವಿಕೃತಿ ಮೆರೆದಿರುವುದಕ್ಕೆ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದೆ.
ಘಟನೆಗೆ ಸಂಬಂಧಪಟ್ಟಂತೆ 25 ಆರೋಪಿಗಳ ವಿರುದ್ಧ ಕೂಡ್ಲಿಗಿ ಠಾಣೆಯ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ.
Comments are closed.