ಮನೋರಂಜನೆ

ಬಿಗ್ ಬಾಸ್ ಫೈನಲಿಗೆ ಕಾಲಿಟ್ಟ ಐದು ಮಂದಿ ಸ್ಪರ್ಧಿಗಳು: ಈ ಬಾರಿಯ ವಿಜೇತರು ಯಾರಾಗಬಹುದು….?

Pinterest LinkedIn Tumblr

‘ಬಿಗ್ ಬಾಸ್ ಕನ್ನಡ 8’ ಕಾರ್ಯಕ್ರಮ ಅಂತಿಮ ಹಂತ ತಲುಪಿದ್ದು, ಕೊನೆಯ ವಾರ ಸದ್ಯ ಚಾಲ್ತಿಯಲ್ಲಿದೆ. ಗ್ರ್ಯಾಂಡ್ ಫಿನಾಲೆಗೆ ಕೌಂಟ್‌ಡೌನ್ ಶುರುವಾಗಿದೆ. ಟಾಪ್ 5 ಹಂತಕ್ಕೆ ಮಂಜು ಪಾವಗಡ, ವೈಷ್ಣವಿ, ಅರವಿಂದ್, ಪ್ರಶಾಂತ್ ಸಂಬರಗಿ ಹಾಗೂ ದಿವ್ಯಾ ಉರುಡುಗ ಲಗ್ಗೆ ಇಟ್ಟಿದ್ದಾರೆ.

ಗ್ರ್ಯಾಂಡ್ ಫಿನಾಲೆಗೂ ಮುನ್ನ ಕಟ್ಟ ಕಡೆಯ ಎಲಿಮಿನೇಷನ್ ಎದುರಿಸಿ ಮಂಜು ಪಾವಗಡ, ವೈಷ್ಣವಿ, ಅರವಿಂದ್, ಪ್ರಶಾಂತ್ ಸಂಬರಗಿ ಹಾಗೂ ದಿವ್ಯಾ ಉರುಡುಗ ಸೇಫ್ ಆಗಿದ್ದಾರೆ. ವೀಕ್ಷಕರಿಂದ ಕಡಿಮೆ ಮತ ಪಡೆದುಕೊಂಡ ದಿವ್ಯಾ ಸುರೇಶ್ ‘ಬಿಗ್ ಬಾಸ್’ ಮನೆಯಿಂದ ಮಿಡ್ ವೀಕ್ ಎಲಿಮಿನೇಟ್ ಆಗಿದ್ದಾರೆ.

ಟಾಪ್ 5 ಹಂತ ತಲುಪುವ ಮೂಲಕ ವೈಷ್ಣವಿ, ಅರವಿಂದ್, ಮಂಜು ಪಾವಗಡ, ದಿವ್ಯಾ ಉರುಡುಗ ಮತ್ತು ಪ್ರಶಾಂತ್ ಸಂಬರಗಿ ‘ಬಿಗ್ ಬಾಸ್ ಕನ್ನಡ 8’ ಕಾರ್ಯಕ್ರಮದ ಫೈನಲಿಸ್ಟ್‌ಗಳಾಗಿದ್ದಾರೆ. ಈ ಐವರ ಪೈಕಿಯೇ ಒಬ್ಬರು ‘ಬಿಗ್ ಬಾಸ್ ಕನ್ನಡ 8’ ಕಾರ್ಯಕ್ರಮದ ವಿಜೇತರಾಗಿ ಹೊರಹೊಮ್ಮಲಿದ್ದಾರೆ.

‘ಬಿಗ್ ಬಾಸ್ ಕನ್ನಡ 8’ ಕಾರ್ಯಕ್ರಮದ ವಿನ್ನರ್ ಯಾರಾಗಬೇಕು ಎಂಬುದರ ಬಗ್ಗೆ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿ ನಡೆಯುತ್ತಿದೆ. ಟಾಪ್ 5 ಹಂತ ತಲುಪಿರುವ ಐವರಿಗೂ ಫ್ಯಾನ್ ಫಾಲೋವಿಂಗ್ ದೊಡ್ಡದಾಗಿಯೇ ಇದೆ. ಮಂಜು ಪಾವಗಡ, ವೈಷ್ಣವಿ, ಅರವಿಂದ್, ಪ್ರಶಾಂತ್ ಸಂಬರಗಿ ಹಾಗೂ ದಿವ್ಯಾ ಉರುಡುಗ ಪೈಕಿ ವಿನ್ನರ್ ಯಾರಾಗಬೇಕು? ನಿಮ್ಮ ಮತ ಯಾರಿಗೆ?

Comments are closed.