ಕರಾವಳಿ

ವಿಶ್ವ ಹಿಂದೂ ಪರಿಷತ್ತಿನ ಹಿರಿಯ ನಾಯಕ ಮನೋಹರ ತುಲಾಜರಾಂ ನಿಧನ – ವಿಹಿಂಪ ಸಂತಾಪ

Pinterest LinkedIn Tumblr

ಮಂಗಳೂರು : ವಿಶ್ವ ಹಿಂದೂ ಪರಿಷತ್ತಿನ ಮಂಗಳೂರು ನಗರ ಜಿಲ್ಲೆಯ ಮಾಜಿ ಅಧ್ಯಕ್ಷರು, ದಕ್ಷಿಣ.ಪ್ರಾಂತ ಕಾರ್ಯಕಾರಿಣಿ ಸದಸ್ಯರು,ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ರಾಜ್ಯ ಅಧ್ಯಕ್ಷರಾಗಿ, ಮತ್ತು ಗೋವನಿತಾಶ್ರಯ ಟ್ರಸ್ಟಿನ ಟ್ರಸ್ಟಿಗಳು ಆಗಿ ಸೇವೆ ಸಲ್ಲಿಸಿದ್ದ ಹಿರಿಯರಾದ ಶ್ರೀ ಮನೋಹರ ತುಲಾಜರಾಂ ಇಹಲೋಕ ತ್ಯಜಿಸಿ ದೈವಾಧೀನರಾಗಿದ್ದಾರೆ.

ನೇರ ನುಡಿ, ಸರಳ – ಶಿಸ್ತಿನ ವ್ಯಕ್ತಿತ್ವ ಅಲ್ಲದೆ ಎಲ್ಲಾ ಕಾರ್ಯಕರ್ತರಿಗೆ ಅಚ್ಚುಮೆಚ್ಚಾಗಿದ್ದ ತುಳಜಾ ರಾಮ್ ಜೀ ಅಗಲುವಿಕೆ ಹಿಂದು ಸಮಾಜಕ್ಕೆ ತುಂಬಲಾರದ ನಷ್ಟ. ಮೃತರ ದಿವ್ಯ ಆತ್ಮಕ್ಕೆ ಉತ್ತಮ ಲೋಕ ಪ್ರಾಪ್ತಿ ಆಗಲಿ ಮತ್ತು ಅವರ ಕುಟುಂಬಕ್ಕೆ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಶ್ರೀ ದೇವರು ಅನುಗ್ರಹಿಸಲಿ.

ನಮ್ಮ ಸಂಘಟನೆಯನ್ನು ಬೆಳೆಸುವಲ್ಲಿ ಅವರ ಅನುಪಮ ಸೇವೆಯನ್ನು ಕೂಡ ಕೃತಜ್ಞತಾ ಪೂರ್ವಕವಾಗಿ ಈ ಸಂದರ್ಭದಲ್ಲಿ ಸ್ಮರಿಸುತ್ತೇವೆ ಎಂದು ವಿಶ್ವ ಹಿಂದು ಪರಿಷತ್ ಪ್ರಾಂತಾಧ್ಯಕ್ಷರು ಪ್ರೊ ಎಂ ಬಿ ಪುರಾಣಿಕ್ , ಪ್ರಾಂತ ಕಾರ್ಯದರ್ಶಿ ಕೃಷ್ಣ ಮೂರ್ತಿ, ವಿಭಾಗ ಕಾರ್ಯದರ್ಶಿ ಶರಣ್ ಪಂಪುವೆಲ್, ವಿಭಾಗ ಸಂಚಾಲಕ್ ಭುಜಂಗ ಕುಲಾಲ್, ಜಿಲ್ಲಾಧ್ಯಕ್ಷರು ಗೋಪಾಲ್ ಕುತ್ತಾರ್, ಜಿಲ್ಲಾ ಕಾರ್ಯದರ್ಶಿ ಶಿವಾನಂದ್ ಮೆಂಡನ್ ಸಂತಾಪ ಸೂಚಿಸಿದರು.

Comments are closed.