
ಮಂಗಳೂರು: ವಿಶ್ವಹಿಂದು ಪರಿಷತ್ ಮಣ್ಣಗುಡ್ಡ ಪ್ರಖಂಡ, ಉರ್ವ ಖಂಡ ಸಮಿತಿಯ ವತಿಯಿಂದ ಉರ್ವ ಪರಿಸರದ ಸುಮಾರು 150 ಕುಟುಂಬಗಳಿಗೆ ಅಕ್ಕಿ ವಿತರಣೆಯು ಮಾರಿಯಮ್ಮ ದೇವಸ್ಥಾನದ ಮುಂಭಾಗದ ಗಣೇಶ ಮಂಟಪದಲ್ಲಿ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿಹಿಂಪ ದ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಾಧ್ಯಕ್ಷರಾದ ಫ್ರೋಫೆಸರ್ ಎಂ.ಬಿ ಪುರಾಣಿಕ್ ರವರು ಕೊರೂನಾ ಎರಡನೇಯ ಅಲೆಯು ಬಡವ ಬಲ್ಲಿದ ಎಂಬ ಭೇದವಿಲ್ಲದೆ ಎಲ್ಲಾ ವರ್ಗದವರನ್ನು ಸಂಕಷ್ಟಕ್ಕೆ ದೂಡಿದೆ.
ಮಧ್ಯಮ ವರ್ಗದವರು ಸ್ವಾಭಿಮಾನದಿಂದ ತನ್ನ ಹಸಿವನ್ನು ಯಾರಲ್ಲಿಯೂ ಹೇಳಿಕೊಳ್ಳದೆ ದುಸ್ತರದಿಂದ ಜೀವನ ನಡೆಸುತ್ತಿದ್ದಾರೆ.ಅಂತವರನ್ನು ವಿಹಿಂಪದ ಉರ್ವ ಖಂಡ ಸಮಿತಿಯವರು ಗುರುತಿಸಿ ಅಕ್ಕಿ ವಿತರಿಸುತ್ತಿರುವುದು ಶ್ಲಾಘನೀಯವೆಂದರು.
ಕೊರೊನಾ ಸಂದರ್ಭದಲ್ಲಿ ವಿಹಿಂಪ ಮತ್ತು ಭಜರಂಗದಳದ ಕಾರ್ಯಕರ್ತರು ರಕ್ತದಾನ ಮಾಡುವುದರೊಂದಿಗೆ ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸಿ, ಅಲ್ಲಲ್ಲಿ ವಿವಿಧ ಶಾಖೆಗಳ ಮೂಲಕ, ಹಸಿವಿನಿಂದ ಬಳಲುತ್ತಿರುವವರಿಗೆ ಆಹಾರ ದಿನಸಿ ಸಾಮಾಗ್ರಿ ವಿತರಿಸುತ್ತಿರುವ ಸೇವಾ ಕಾರ್ಯದಿಂದ ಪುಣ್ಯವು ಪ್ರಾಪ್ತಿಯಾಗುವುದೆಂದರು.
ವೇದಿಕೆಯಲ್ಲಿ ಅತಿಥಿಗಳಾಗಿ ವಿಹಿಂಪ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್,ಸ್ಥಳೀಯ ಜನಪ್ರತಿನಿಧಿ ಗಣೇಶ್ ಕುಲಾಲ್, ನಾಮನಿರ್ದೇಶನ ಜನಪ್ರತಿನಿಧಿ ರಾಧಾಕೃಷ್ಣ ಅಶೋಕನಗರ, ಮಣ್ಣಗುಡ್ಡ ಪ್ರಖಂಡ ಅಧ್ಯಕ್ಷರಾದ ವಸಂತ್ ಶೇಟ್ , ನಿಕಟಪೂರ್ವ ಅಧ್ಯಕ್ಷ ವಿಶ್ವನಾಥ ಶೆಟ್ಟಿ ತೀರ್ಥಹಳ್ಳಿ ಉಪಸ್ಥಿತರಿದ್ದರು.
ಉರ್ವ ಖಂಡ ಸಮಿತಿ ಅಧ್ಯಕ್ಷ ರವಿ ಶೆಟ್ಟಿ ಅಶೋಕನಗರ ಸ್ವಾಗತಿಸಿದರು. ಕೋಶಾಧಿಕಾರಿ ದಾಮೋದರ ಚೆಟ್ಟಿಯಾರ್ ಪ್ರಸ್ತಾವನೆಯೊಂದಿಗೆ ಕಾರ್ಯಕ್ರಮವನ್ನು ನಿರೂಪಿಸಿದರು.
ಜತೆ ಕಾರ್ಯದರ್ಶಿ ಕೃಷ್ಣ ಶ್ರೀಯಾನ್ ವಂದಿಸಿದರು. ಉರ್ವ ಪಂಚಮುಖಿ ಬಳಗದ ಸದಸ್ಯರು ಅಕ್ಕಿ ವಿತರಣೆಯಲ್ಲಿ ಸಹಕರಿಸಿದರು.
Comments are closed.