ಕರಾವಳಿ

ಮಂಗಳೂರಿನ‌ ವೆನ್ಲಾಕ್ ಆಯುಷ್ ಬ್ಲಾಕ್‌ನಲ್ಲಿ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಎರಡನೇ ಡೋಸ್ ಲಭ್ಯ

Pinterest LinkedIn Tumblr

ಮಂಗಳೂರು :ನಗರದ ವೆನ್ಲಾಕ್ ಆಯುಷ್ ಬ್ಲಾಕ್ ನಲ್ಲಿ ಜೂನ್ 30ರಂದು ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಯ ಎರಡನೇ ಡೋಸ್ ಪಡೆಯುವ ಫಲಾನುಭವಿಗಳಿಗೆ ಲಸಿಕೆ ಲಭ್ಯವಿದೆ.

ಕೋವಿಶೀಲ್ಡ್ ಮೊದಲ ಡೋಸ್ ಪಡೆದು 84 ದಿನ ಪೂರ್ತಿಯಾದವರು ಹಾಗೂ ಕೋವಿಶೀಲ್ಡ್ ಪಡೆದ ಎನ್ ಆರ್ ಐ ಪ್ರಯಾಣಿಕರು 28 ದಿನಗಳಾದವರು ಎರಡನೇ ಡೋಸ್ ಪಡೆಯಬಹುದು.

ಕೋವ್ಯಾಕ್ಸಿನ್ ಮೊದಲ ಡೋಸ್ ಪಡೆದು 28 ದಿನಗಳಾದ ಫಲಾನುಭವಿಗಳು ಎರಡನೇ ಡೋಸ್ ಹಾಗೂ 45 ವರ್ಷಕ್ಕಿಂತ ಮೇಲ್ಪಟ್ಟವರು ಕೋವ್ಯಾಕ್ಸಿನ್ ಮೊದಲ ಡೋಸ್ ಲಸಿಕೆ ಪಡೆಯಬಹುದು ಎಂದು ಜಿಲ್ಲಾ ಆರೋಗ್ಯ ಇಲಾಖೆ ಪ್ರಕಟನೆ ತಿಳಿಸಿದೆ.

Comments are closed.