ಕರಾವಳಿ

ಫಲ್ಗುಣಿ ನದಿಗೆ ಸೇರುತ್ತಿರುವ ಕಪ್ಪು ಬಣ್ಣದ ಕಲುಷಿತ ನೀರು :ನ್ಯಾಯಾಧೀಶೆರಿಂದ ಸ್ಥಳ ಪರಿಶೀಲನೆ

Pinterest LinkedIn Tumblr

ಮಂಗಳೂರು  : ಮಂಗಳೂರು ತಾಲೂಕಿನ ಪಚ್ಚನಾಡಿ ಮತ್ತು ಮಂದಾರ ಗ್ರಾಮದ ಸಾರ್ವಜನಿಕರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಾಯವಾಣಿ ಮೂಲಕ ಸಂಪರ್ಕಿಸಿ ಪಾಲ್ಗುಣಿ ನದಿಗೆ ಕಪ್ಪು ಬಣ್ಣದ ಕಲುಷಿತ ನೀರು ಬಿಡಲಾಗಿದ್ದು, ಮಂಗಳೂರಿನ ಜನರಿಗೆ ಕುಡಿಯುವ ನೀರನ್ನು ಪೂರೈಸಲು ಫಾಲ್ಗುಣಿ ನದಿಯ ನೀರನ್ನು ಬಳಸಲಾಗುತ್ತಿರುವುದಾಗಿ ಸಂಬಂಧಪಟ್ಟವರಿಗೆ ದೂರನ್ನು ನೀಡಿದ್ದರು.

ಆದರೆ ಸಾರ್ವಜನಿಕರು ನೀಡಿರುವ ದೂರಿನ ಬಗ್ಗೆ ಯಾವುದೇ ರೀತಿಯ ಕ್ರಮ ಕೈಗೊಂಡಿರುವುದಿಲ್ಲವೆಂದು ತಿಳಿಸಿರುವುದರಿಂದ ಸದರಿ ಸ್ಥಳಕ್ಕೆ ಭೇಟಿ ನೀಡಲು ಅಧ್ಯಕ್ಷರು ಮತ್ತು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಅನುಮತಿ ಪಡೆದು ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಎ.ಜಿ. ಶಿಲ್ಪ ಅವರು ಪಚನಾಡಿ ಮತ್ತು ಮಂದರಾ ಗ್ರಾಮಕ್ಕೆ ಭೇಟಿ ಅಲ್ಲಿನ ಸಾರ್ವಜನಿಕರಲ್ಲಿ ವಿಚಾರಣೆ ನಡೆಸಿದ್ದಾರೆ.

ಕಲುಷಿತ ನೀರು ಸೇರುತ್ತಿರುವ ಸ್ಥಳವಾದ ಪಚನಾಡಿ ಘನತ್ಯಾಜ್ಯದ ಕಲುಷಿತ ನೀರು ಹೊಳೆಯ ಮೂಲಕ ಫಲ್ಗುಣಿ ನದಿಗೆ ಕಪ್ಪು ಬಣ್ಣದ ಕಲುಷಿತ ನೀರು ಸೇರುತ್ತಿರುವ ಸ್ಥಳವನ್ನು ವೀಕ್ಷಿಸಿ ವಾಸ್ತವಾಂಶವನ್ನು ತಿಳಿದು ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಬಗ್ಗೆ ಆದಷ್ಟು ಬೇಗ ಸೂಕ್ತ ಕ್ರಮಕೈಗೊಳ್ಳುವಂತೆ ತಿಳಿಸಲಾಗುವುದು ಎಂದು ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.