
ಮಂಗಳೂರು: ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ನಗರದ ಕೊಂಚಾಡಿಯ ಲಗಾನ್ ಕ್ರಿಕೆಟರ್ಸ್ ಆಶ್ರಯದಲ್ಲಿ ಅವರ ಕಛೇರಿ ಮುಂಭಾಗದಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಜೆ. ಆರ್. ಲೋಬೊರವರು ಗಿಡಗಳನ್ನು ನೆಡುವುದರ ಮೂಲಕ ದಿನಾಚರಣೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ, ಇಂದಿನ ದಿನಗಳಲ್ಲಿ ಆಮ್ಲಜನಕ ಎಷ್ಟರ ಮಟ್ಟಿಗೆ ಅವಶ್ಯಕತೆ ಇದೆ ಎಂದು ಕೊರೋನಾ ರೋಗ ನಮಗೆಲ್ಲರಿಗೂ ಕಲಿಸಿ ಕೊಟ್ಟಿದೆ. ಐದು ಸೆಕೆಂಡ್ ಆಮ್ಲಜನಕ ಇಲ್ಲದಿದ್ದರೆ ವಿಶ್ವ ಎಲ್ಲಿಗೆ ಬಂದು ಮುಟ್ಟಬಹುದು ಎಂದು ನಾವೆಲ್ಲರೂ ಆಲೋಚನೆ ಮಾಡಬೇಕು. ಅದು ಊಹಿಸಲೂ ಅಸಾಧ್ಯ ಎಂಬ ಪರಿಸ್ಥಿತಿ ಬಂದು ಮುಟ್ಟಬಹುದು.
ಆಮ್ಲಜನಕ ವಿಶ್ವಕ್ಕೆ ಉಚಿತವಾಗಿ ದೊರಕಿದೆ. ಅದಕ್ಕೆ ಮುಖ್ಯ ಕಾರಣ ಗಿಡಗಳು ಮತ್ತು ಮರಗಳು. ಅದನ್ನು ನಮ್ಮ ಜೀವನದ ಸಂಗಾತಿಗಳಾಗಿ ನಾವೆಲ್ಲರೂ ಉಳಿಸಬೇಕು ಮತ್ತು ಬೆಳೆಸಬೇಕು. ಇಲ್ಲದಿದ್ದರೆ ನಾವೆಲ್ಲರೂ ಸರ್ವ ನಾಶವಾಗುವುದು ಖಂಡಿತ. ನಮ್ಮ ಶ್ರೇಯಸ್ಸಿಗೋಸ್ಕರ, ಉಳಿವುಗೋಸ್ಕರ ಗಿಡ ಮರಗಳನ್ನು ಉಳಿಸುವುದು ಅಗತ್ಯವಾಗಿದೆ. ಇವತ್ತಿನ ಪರಿಸರ ದಿನಾಚರಣೆಯ ದಿನದಂದು ನಾವೆಲ್ಲರೂ ಗಿಡಗಳನ್ನು ನೆಡೋಣ ಮತ್ತು ಪೋಷಿಸಲು ಪ್ರಯತ್ನಿಸೋಣ ಎಂದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಒಬಿಸಿ ಅಧ್ಯಕ್ಷ ಉಮೇಶ್ ದಂಡಕೇರಿ, ಗಣೇಶ್, ಲಗಾನ್ ಕ್ರಿಕೆಟರ್ಸ್ ಕ್ಲಬ್ ನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
Comments are closed.