
ಮುಂಬಯಿ : ಜಗತ್ತಿಗೇ ಆತಂಕವನ್ನುಂಟುಮಾಡಿದ ಮಹಾಮಾರಿ ಕೊರೋನಾದ ಬಗೆಗಿನ ಸರಕಾರದ ಲಾಕ್ ಡೌನ್ ನಿರ್ಬಂಧಗಳಿಂದಾಗಿ ಈ ವರ್ಷವೂ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ದಿ. ಶ್ರೀ ಜಾರ್ಜ್ ಫೆರ್ನಾಂಡಿಸ್ ರ 91ನೇ ಹುಟ್ಟುಹಬ್ಬದ ಸಂಸ್ಮರಣೆ ಸಮಾರಂಭವನ್ನು ವೆಬಿನಾರ್ ಮೂಲಕ ಆಚರಿಸಲಾಯಿತು.

ದಿ. ಶ್ರೀ ಜಾರ್ಜ್ ಫೆರ್ನಾಂಡಿಸ್

ಈ ಸಂದರ್ಭದಲ್ಲಿ ಸಮಾರಂಭದಲ್ಲಿ ಪಾಲ್ಗೊಂಡಿದ್ದ ವಿವಿಧ ಗಣ್ಯರು ದಿ. ಶ್ರೀ ಜಾರ್ಜ್ ಫೆರ್ನಾಂಡಿಸ್ ಅವರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವೆಬಿನಾರ್ ಮೂಲಕ ವ್ಯಕ್ತಪಡಿಸಿದರು.
ಯಾರು ಏನು ಹೇಳಿದ್ದಾರೆ… ಇಲ್ಲಿದೆ ಸಮಗ್ರ ವಿವರ :
ತುಳುನಾಡಿನ ಹೆಮ್ಮೆಯ ಸುಪುತ್ರ ಜಾರ್ಜ್ ಫೆರ್ನಾಂಡಿಸ್ ರವರ ಹೆಸರು ಶಾಶ್ವತವಾಗಿ ಉಳಿಯಲು ಮಂಗಳೂರು ವಿಮಾನ ನಿಲ್ಧಾಣಕ್ಕೆ ”ಜಾರ್ಜ್ ಫೆರ್ನಾಂಡಿಸ್ ಅಂತರಾಷ್ಟ್ರೀಯ ವಿಮಾನ ನಿಲ್ಧಾಣ” ಎಂಬುದಾಗಿ ನಾಮಕರಣ ಮಾಡಬೇಕಾಗಿದೆ . ದೇಶದ ನಿರ್ಮಾಣದಲ್ಲಿ ಅವರ ಅನನ್ಯ ಕೊಡುಗೆಯಿದ್ದು, ಅವರಂತಹ ಮುಖಂಡರು ಇನ್ನು ಸಿಗಲಾರರು.
– ನ್ಯಾ. ಪ್ರಕಾಶ್ ಎಲ್. ಶೆಟ್ಟಿ, –
ಮಾಜಿ ಅಧ್ಯಕ್ಷ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ
**
ಕೋರೋನಾ ದಿಂದಾಗಿ ಬಹಳ ಸಮಯದ ನಂತರ ಕೊಂಕಣ ರೈಲ್ವೆಯ ಶಿಲ್ಪಿ ಜಾರ್ಜ್ ಫೆರ್ನಾಂಡಿಸ್ ರವರ ಹುಟ್ಟು ಹಬ್ಬದಂದು ನಾವೆಲ್ಲರೂ ಸೇರುತ್ತಿರುವುದು ಸಂತೋಷವಾಗುತ್ತಿದೆ. ಸಮಿತಿಯು ಜಾರ್ಜ್ ಫೆರ್ನಾಂಡಿಸ್ ರ ಹೆಸರನ್ನು ಶಾಶ್ವತವಾಗಿರಿಸಲು ಸಮಿತಿಯು ಕೈಕೊಂಡ ಕಾರ್ಯ ಅಭಿನಂದನೀಯ.- ವಿಶ್ವನಾಥ ಮಾಡಾ, –
ಮಾಜಿ ಅಧ್ಯಕ್ಷ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ
**
ನಮ್ಮ ಸಮಿತಿಯ ನಿಯೋಗ ವು ಕರ್ನಾಟಕ ಸರಕಾರದ ಮುಖ್ಯ ಮಂತ್ರಿಯವರನ್ನು ಭೇಟಿ ಯಾಗಿ ಜಾರ್ಜ್ ಫೆರ್ನಾಂಡಿಸ್ ರ ಹೆಸರನ್ನು ಶಾಶ್ವತವಾಗಿರಿಸಲು ಮಂಗಳೂರು ವಿಮಾನ ನಿಲ್ಧಾಣಕ್ಕೆ ”ಜಾರ್ಜ್ ಫೆರ್ನಾಂಡಿಸ್ ಅಂತರಾಷ್ಟ್ರೀಯ ವಿಮಾನ ನಿಲ್ಧಾಣ” ಪುನರ್ನಮಕರಣ ಮಾಡುವಂತಾಗಬೇಕು.
– ಹರೀಶ್ ಕುಮಾರ್ ಶೆಟ್ಟಿ, –
ಮಾಜಿ ಅಧ್ಯಕ್ಷ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ
****
ಜಾರ್ಜ್ ಫೆರ್ನಾಂಡಿಸ್ ಜನ್ಮದಿನದಂದು ನಾವು ಒಂದು ಉತ್ತಮ ನಿರ್ಣಯವನ್ನು ಕೈಗೊಡಿದ್ದು ಇದು ಹೆಮ್ಮೆಯ ವಿಷಯ. ಅವರ ಹೆಸರು ಹೇಳುತ್ತಿದ್ದಂತೆಯೇ ನಮಗೆ ಸ್ಪೂರ್ತಿ ತುಂಬುತ್ತಿದೆ. ನಾವೆಲ್ಲರೂ ಸೇರಿ ಮಂಗಳೂರು ವಿಮಾನ ನಿಲ್ದಾಣದ ನಾಮಕರಣದ ಬಗ್ಗೆ ಮುಂದಿನ ಹೆಚ್ಚೆ ಇಡುವು ದರೊಂದಿಗೆ ಅವರ ಹೆಸರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಶ್ವತವಾಗಿ ಇರಲಿ.
– ಧರ್ಮಪಾಲ್ ಯು. ದೇವಾಡಿಗ –
ಮಾಜಿ ಅಧ್ಯಕ್ಷ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ
****
ಜೆ. ಎಫ್ . ಕೆನಡಿ ವಿಮಾನ ನಿಲ್ದಾಣದಂತೆ ಮಂಗಳೂರಿನ ವಿಮಾನ ನಿಲ್ಧಾಣವು ”ಜಾರ್ಜ್ ಫೆರ್ನಾಂಡಿಸ್ ಅಂತರಾಷ್ಟ್ರೀಯ ವಿಮಾನ ನಿಲ್ಧಾಣ” ವಾಗಲಿ. ಜಾರ್ಜ್ ಫೆರ್ನಾಂಡಿಸ್ ರ ಹೆಸರು ಶಾಶ್ವತವಾಗಿರಲಿ
-ಫ್ರಾಂಕ್ ಫೆರ್ನಾಂಡಿಸ್,
ಪ್ರಖ್ಯಾತ ಉದ್ಯಮಿ. ವಾಗ್ಮಿ .ದುಬೈ
***
ಜಾರ್ಜ್ ಫೆರ್ನಾಂಡಿಸ್ ಅವರದ್ದು ಅರ್ಥಪೂರ್ಣ ಸಾಧನೆ. ನಮ್ಮ ಸಮಿತಿಗೆ ಅವರು ಒಂದು ಶಕ್ತಿಯಾಗಿದ್ದರು. ನಮ್ಮ ಜೆಲ್ಲೆಯಲ್ಲಿ ಅವರ ಹೆಸರು ಶಾಶ್ವತವಾಗಿ ಉಳಿಯಲು ನಾವೆಲ್ಲರೂ ಒಂದಾಗಿ ಪ್ರಯತ್ನಿಸೋಣ.
– ಎಲ್ ವಿ ಅಮೀನ್, (ಅಮೇರಿಕಾದಿಂದ) ಉಪಾಧ್ಯಕ್ಷರು – ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ
****
ಹತ್ತು ಬಾಷೆಯನ್ನು ಅರಿತ ಜಾರ್ಜ್ ಫೆರ್ನಾಂಡಿಸ್ ರು ಒರ್ವ ನಿಪುಣ ರಾಜ ಕಾರಣಿ. ಅಸಾಧಾರಣ ವ್ಯಕ್ತಿತ್ವದ ಸಾಧಾರಣ ವ್ಯಕ್ತಿ ಜಾರ್ಜ್ ಫೆರ್ನಾಂಡಿಸ್ ಆಗಿದ್ದು ಅವರ ಹೆಸರನ್ನು ಶಾಶ್ವತವಾಗಿರಿಸುವಲ್ಲಿ ನಮ್ಮ ಸಮಿತಿಯು ಕ್ರೀಯಾಶೀಲವಾಗಿದೆ.
-ಸಿ ಎ ಐ ಆರ್ ಶೆಟ್ಟಿ, ಉಪಾಧ್ಯಕ್ಷರು –
ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ
****
ಮಾನವನ ಹಕ್ಕಿಗಾಗಿ ಹೋರಾಟ ಮಾಡಿದ ಜಾರ್ಜ್ ಫೆರ್ನಾಂಡಿಸ್ ರು ಕೇವಲ ಒರ್ವ ವ್ಯಕ್ತಿಯಾಗಿರದೆ ಒಂದು ಸಂಸ್ಥೆಯಾಗಿದ್ದರು. ಅವರು ನಮ್ಮ ದೇಶದ ಪ್ರಧಾನಿಯಾಗಲು ಅರ್ಹರಾಗಿದ್ದರು . ಅವರು ಇಂದು ನಮ್ಮೊಂದಿಗಿದ್ದಲ್ಲಿ ನಮ್ಮ ದೇಶದ ಪ್ರಧಾನಿಯಾಗುತಿದ್ದಲ್ಲಿ ನಮ್ಮ ದೇಶದಲ್ಲಿ ಉತ್ತಮ ಬದಲಾವಣೆಯಾಗುತ್ತಿತ್ತು. ವಿಮಾನ ನಿಲ್ಧಾಣಕ್ಕೆ ಅವರ ಹೆಸರನ್ನು ಇಡಲು ಅಗತ್ಯವಿದ್ದಲ್ಲಿ ಹೋರಾಟವನ್ನೂ ನಡೆಸಬೇಕಾಗಿದೆ.
– ಡಾ. ಆರ್. ಕೆ ಶೆಟ್ಟಿ,
ಗೌರವ ಪ್ರಧಾನ ಕಾರ್ಯದರ್ಶಿ ಬಂಟರ ಸಂಘ ಮುಂಬಯಿ
****
ಕಾರ್ಮಿಕ ನಾಯಕನಾಗಿ, ಕೇಂದ್ರ ಸಚಿವರಾಗಿ ಜನಸೇವೆಯನ್ನು ಮಾಡಿದ ಇಂತಹ ಮಹಾನ ವ್ಯಕ್ತಿಯ ಹುಟ್ಟು ಹಬ್ಬದಂದು ನಮ್ಮ ಸಮಿತಿಯು ಉತ್ತಮವಾದ ನಿರ್ಣಯವನ್ನು ಕೈಗೊಳ್ಳುತ್ತಿರುವುದು ಅಭಿನಂದನೀಯ.
-ಕೆ. ಸಿ. ಶೆಟ್ಟಿ,
ಕಾರ್ಯಾಧ್ಯರು :
ಬಂಟ್ಸ್ ಚೇಂಬರ್ ಆಪ್ ಕಾಮರ್ಸ್
******
ಸಮಿತಿಯ ಉತ್ತಮ ಕೆಲಸಕ್ಕೆ ನಮ್ಮ ಸಂಸ್ಥೆಯು ಸದಾ ಪ್ರೋತ್ಸಾಹ ನೀಡುತ್ತಿದೆ. ಬಡವರ ನಾಯಕ ಜಾರ್ಜ್ ಫೆರ್ನಾಂಡಿಸ್ ಹೆಸರು ಶಾಶ್ವ ತವಾಗಿ ಉಳಿಯಲು ಸಮಿತಿಯು ಕೈಕೊಂಡ ಕಾರ್ಯ ಸ್ವಾಗತಾರ್ಹ.
-ಹರೀಶ್ ಅಮೀನ್
,ಆಧ್ಯಕ್ಷರು, ಬಿಲ್ಲವರ ಅಸೋಸಿಯೇಷನ್ ಮುಂಬಯಿ
****
ಮಹಾನ್ ನಾಯಕ ಜಾರ್ಜ್ ಫೆರ್ನಾಂಡಿಸ್ ರ ಹೆಸರು ನಮ್ಮ ನಾಡಲ್ಲಿ ಶಾಶ್ವತ ವಾಗಿರಲಿ, ಮಂಗಳೂರಿನ ವಿಮಾನ ನಿಲ್ಧಾಣವು ”ಜಾರ್ಜ್ ಫೆರ್ನಾಂಡಿಸ್ ಅಂತರಾಷ್ಟ್ರೀಯ ವಿಮಾನ ನಿಲ್ಧಾಣ” ವಾಗಿ ಪುನರ್ ನಾಮಕರಣ ಗೊಳ್ಳುವುದು ಅರ್ಥಪೂರ್ಣವಾಗಿದೆ.v
– ಜಿ. ಟಿ. ಆಚಾ,ರ್ಯ,
ಮಾಜಿ ಅಧ್ಯಕ್ಷರು : ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್
***********
ಜಾರ್ಜ್ ಫೆರ್ನಾಂಡಿಸ್ ಅವರು ನನಗೆ ಮೊದಲೇ ಪರಿಚಿತರು. ಸೂರ್ಯ ಚಂದ್ರರಿರುವ ತನಕ ಅವರ ಹೆಸರು ನಮ್ಮ ಜಿಲ್ಲೆಯಲ್ಲಿ ಶಾಶ್ವತವಾಗಿರಲಿ.
– ಪಿ .ಧನಂಜಯ ಶೆಟ್ಟಿ, ಉಪಾಧ್ಯಕ್ಷರು –
ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ
****
ನಮ್ಮ ಜಿಲ್ಲೆಯು ಬಹಳ ದೊಡ್ಡ ನಾಯಕನನ್ನು ಹೊಂದಿದ್ದಲ್ಲಿ ಅದು ಜಾರ್ಜ್ ಫೆರ್ನಾಂಡಿಸ್. ಅಂತವರು ನಮ್ಮ ಸಮಿತಿಗೆ/ಸಮಿತಿಯ ಸಂಸ್ಥಾಪಕ/ ಅಧ್ಯಕ್ಷರಾದ ಜಯಕೃಷ್ಣ ಶೆಟ್ಟಿಯವರಿಗೆ ವರವಾಗಿ ಸಿಕ್ಕಿದ್ದರು. ಜಾರ್ಜ್ ಫೆರ್ನಾಂಡಿಸ್ ರಿಗೆ ಯಾವತ್ತು ಮರಣವಿಲ್ಲ. ಅವರ ಹೆಸರು ಅಜರಾಮರವಾಗಿರಲಿ.
ದಯಾಸಾಗರ ಚೌಟ
ವಕ್ತಾರ : ಜಯಶ್ರೀ ಕೃಷ್ಣ ಪರಿಸರಪ್ರೇಮಿ ಸಮಿತಿ
*****
ಜಾರ್ಜ್ ಫೆರ್ನಾಂಡಿಸ್ ಅವರಲ್ಲಿ ನಾನು ಒಮ್ಮೆ ತುಳು ಭಾಷೆಯಲ್ಲಿ ಮಾತನಾಡಿದ್ದಾಗ ಬಹಳ ಸಂತೋಷ ವ್ಯಕ್ತಪಡಿಸಿದ್ದರು. ಮಂಗಳೂರಿನ ವಿಮಾನ ನಿಲ್ಧಾಣವು ”ಜಾರ್ಜ್ ಫೆರ್ನಾಂಡಿಸ್ ಅಂತರಾಷ್ಟ್ರೀಯ ವಿಮಾನ ನಿಲ್ಧಾಣ” ವಾಗಿ ಪುನರ್ ನಾಮಕರಣ ಗೊಳ್ಳುತ್ತಿರುವುದು ಸ್ವಾಗತಾರ್ಹ.
-ದೇವದಾಸ್ ಕುಲಾಲ್ –
ಆಧ್ಯಕ್ಷರು, ಕುಲಾಲ ಸಂಘ, ಮುಂಬಯಿ
*****
ಜಾರ್ಜ್ ಫೆರ್ನಾಂಡಿಸ್ ರು ಎಲ್ಲಾ ಸಮುದಾಯಕ್ಕೆ ಬೇಕಾದ ವ್ಯಕ್ತಿಯಾಗಿದ್ದರು. ಯವುದೇ ಉತ್ತಮ ಕೆಲಸಕ್ಕೆ ರಾಜಕೀಯದ ಆತಂಕವಿದೆ. ನಮ್ಮ ಉದ್ದೇಶವು ಯವುದೇ ಆಡಚಣೆಯಿಲ್ಲದೆ ಪೂರ್ಣಗೊಳ್ಳಲಿ.
–ಚಿತ್ರಾಪು ಕೆ ಎಮ್ . ಕೋಟ್ಯಾನ್ , ಗೌರವ ಪ್ರಧಾನ ಕಾರ್ಯದರ್ಶಿ ವಿದ್ಯಾದಾಯಿನಿ ಸಭಾ, ಮುಂಬಯಿ
******
ಸಮಿತಿಯ ಎಲ್ಲಾ ಕೆಲಸಕ್ಕೆ ನಮ್ಮ ಸಹಕಾರ, ಸಹಭಾಗಿತ್ವ ಹಾಗೂ ಪ್ರೋತ್ಸಾಹವಿದೆ.
-ಅಡ್ವೋಕೇಟ್ ಆರ್ ಎಮ್ ಭಂಡಾರಿ,
ಅಧ್ಯಕ್ಷರು:ಭಂಡಾರಿ ಸೇವಾ ಸಂಘ ಮುಂಬಯಿ
*******
ಸಮಿತಿಯು,ಕೊಂಕಣ ರೈಲ್ವೆ ಖಾಸಗೀಕರಣದ ಬಗ್ಗೆ ಚಿಂತಿಸಬೇಕಾಗಿದೆ, ಸಮಿತಿಯು ಕೈಗೊಂಡ ನಿರ್ಧಾರಗಳಿಗೆ ನಮ್ಮ ಅಳಿಲ ಸೇವೆ/ಬೆಂಬಲ ಸದಾ ಇದೆ. ವಿಮಾನ ನಿಲ್ಧಾಣದ ಪುನರ್ ನಾಮಕರಣದ ಬಗ್ಗೆ ನಾವೆಲ್ಲರೂ ಕೈಜೋಡಿಸೋಣ
– ರವಿ ಎಸ್. ದೇವಾಡಿಗ
, ಅಧ್ಯಕ್ಷರು, ದೇವಾಡಿಗ ಸಂಘ ಮುಂಬಯಿ
*******
ಇಂದು ಜಾರ್ಜ್ ಫೆರ್ನಾಂಡಿಸ್ ಹುಟ್ಟು ಹಬ್ಬವನ್ನು ಸಮಿತಿಯು ಅರ್ಥಪೂರ್ಣವಾಗಿ ಆಚರಿಸುತ್ತಿದೆ. ದೇಶ ಸೇವೆ ಮಾಡಲು ಅವರಿಂದ ಕಲಿಯಬೇಕು. ಜಾರ್ಜ್ ಫೆರ್ನಾಂಡಿಸ್ ಅವರ ಸಾಧನೆಯನ್ನು ಗೌರವಿಸು ವಂತಾಗಬೇಕು. ಜಾರ್ಜ್ ಫೆರ್ನಾಂಡಿಸ್ ಅಂತರಾಷ್ಟ್ರೀಯ ವಿಮಾನ ನಿಲ್ಧಾಣ” ವಾಗಿ ಪುನರ್ ನಾಮಕರಣ ಗೊಳ್ಳುವು ದರೊಂದಿಗೆ ಅವರ ಹೆಸರು ಶಾಶ್ವತವಾಗಿ ಉಳಿಯಲಿ.
– ಡಾ. ಸುರೇಂದ್ರಕುಮಾರ್ ಹೆಗ್ಡೆ,
ಅಧ್ಯಕ್ಷರು, ಕನ್ನಡಿಗರ ಕಲಾವಿದರ ಪರಿಷತ್ತು ಮಹಾರಾಷ್ಟ್ರ
****
ಜಾರ್ಜ್ ಫೆರ್ನಾಂಡಿಸ್ ರಂತಹ ಮಹಾನ್ ವ್ಯಕ್ತಿ ನಮ್ಮ ಊರಿಗೆ ತೋನ್ಸೆfಗೆ ಆಗಮಿಸಿದ್ದ ಬಗ್ಗೆ ಜಯಕೃಷ್ಣ ಶೆಟ್ಟಿಯವರನ್ನು ಅಭಿನಂದಿಸುತ್ತೇನೆ. ಜಾರ್ಜ್ ರವರ ಬಗ್ಗೆ ಇದೀಗ ಹೆಚ್ಚಿನ ಮಾಹಿತಿ ಪಡೆಯುವ ಅವಕಾಶ ಸಮಿತಿಯಿಂದ ದೊರಕಿದೆ.
– ಶೇಖರ್ ಗುಜ್ಜರಬೆಟ್ಟು,
****
ಇಂದಿನ ವಿಷಯ ಬಹಳ ಮಹತ್ವಪೂರ್ಣವಾಗಿದ್ದು ನಮ್ಮ ಸಮಿತಿಯು ಅವರ ಮಾರ್ಗದರ್ಶನದಲ್ಲಿ ಮುಂದುವರಿದ ಕಾರಣ ಈ ತನಕ ಸಮಿತಿಯು ಕೈಗೊಂಡ ಯಾವುದೇ ಕೆಲಸದಲ್ಲಿ ವಿಫಲವಾಗಿಲ್ಲ. ಆದುದರಿಂದ ಸಮಿತಿಯ ಈ ನಿರ್ಧಾರ ಬೇಗನೆ ಪೂರ್ಣಗೊಳ್ಳಲಿ.
– ಪ್ರೊಫೆಸರ್ ಶಂಕರ್ ಉಡುಪಿ, ಸಮಿತಿಯ ಗೌರವ ಕಾರ್ಯದರ್ಶಿ
*****
ಜಾರ್ಜ್ ಫೆರ್ನಾಂಡಿಸ್ ರು ಮರೆಯಲಾರದ ಮಹನೀಯರು ಹಾಗೂ ಅವರು ನಮ್ಮ ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೆ ರಾಷ್ಟ್ರ ಹೆಮ್ಮೆ ಪಡುವಂತಹ ನಾಯಕ.
-ಎಂ. ಎನ್. ಕರ್ಕೇರ – ಕಾರ್ಯಾಧ್ಯಕ್ಷರು, ಬಿಲ್ಲವರ ಅಸೋಷಿಯೇಶನ್ ಚೆಂಬೂರು ಸ್ಥಳೀಯ ಸಮಿತಿ.
********************
ಜಾರ್ಜ್ ಫೆರ್ನಾಂಡಿಸ್ ರ ಮಹಾನ್ ವ್ಯಕ್ತಿತ್ವದ ಬಗ್ಗೆ, ನಮ್ಮ ಸಮಿತಿ ಹಾಗೂ ಜಾರ್ಜ್ ರವರ ನಿಕಟವರ್ತಿಗಳಿಂದ ಮಾಹಿತಿ ಪಡೆದು ಪುಸ್ತಕ ರಚಿಸಿದ್ದೇನೆ. ಇಂದು ಕಾರಣಾಂತರದಿಂದ ಬಿಡುಗಡೆ ಮಾಡಲಾಗಲಿಲ್ಲ.ಆದಷ್ಟು ಬೇಗನೆ ಪುಸ್ತಕವನ್ನು ಬಿಡುಗಡೆಗೊಳಿಸಲಿರುವೆವು.
– ಸುರೇಖಾ ದೇವಾಡಿಗ
ಲೇಖಕಿ, ಮುಂಬಯಿ.
********
ಜಾರ್ಜ್ ಫೆರ್ನಾಂಡಿಸ್ ರನ್ನು ಹತ್ತಿರದಿಂದ ನೋಡಿದ್ದು,ಅವರ ಬಗ್ಗೆ ಸಮಿತಿಯು ಕೈಗೊಂಡ ನಿರ್ಣಯ ಅಭಿನಂದನೀಯ.
– ಕೇಶವ ಆಳ್ವ,
ವರದಿ : ದಿನೇಶ್ ಕುಲಾಲ್ /ಈಶ್ವರ ಎಂ. ಐಲ್
Comments are closed.