ಕರಾವಳಿ

ಕುಂದಾಪುರದ ತಲ್ಲೂರು ಸಹಿತ ಉಡುಪಿ ಜಿಲ್ಲೆಯ 7 ಗ್ರಾ.ಪಂ ಜೂ.5ರಿಂದ 2 ದಿನ ಕಂಪ್ಲೀಟ್ ಲಾಕ್ ಡೌನ್

Pinterest LinkedIn Tumblr

ಉಡುಪಿ: ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವಿಟಿ ರೇಟ್ ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚುತ್ತಿದ್ದು ಗ್ರಾಮೀಣ ಭಾಗದಲ್ಲಿ ಪಾಸಿಟಿವ್ ಕೇಸುಗಳ‌‌ ಸಂಖ್ಯೆ ಜಾಸ್ಥಿಯಾಗುತ್ತಿದೆ.

(ಗ್ರಾಮಪಂಚಾಯತಿಯೊಂದಕ್ಕೆ ಡಿಸಿ ಭೇಟಿ- ಸಂಗ್ರಹ ಚಿತ್ರ)

50ಕ್ಕಿಂತ ಅಧಿಕ ಕೊರೋನಾ ಪಾಸಿಟಿವ್ ಪ್ರಕರಣ ದಾಖಲಾದ ಗ್ರಾಮ ಪಂಚಾಯತ್ ಗಳನ್ನು‌ ಸಂಪೂರ್ಣ ಲಾಕ್ಡೌನ್ ಮಾಡಲು ಎರಡು ದಿನಗಳ ಹಿಂದೆ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ‌ ಆದೇಶಿಸಿದ್ದು ಉಡುಪಿ‌ ಜಿಲ್ಲಾಡಳಿತ 33 ಗ್ರಾಮಪಂಚಾಯತಿಯನ್ನು ಬುಧವಾರದಿಂದ ಲಾಕ್ ಮಾಡಿತ್ತು. ಮುಂದುವರಿದ ಭಾಗವಾಗಿ ಜಿಲ್ಲೆಯ 7 ಗ್ರಾಮಪಂಚಾಯತಿ ವ್ಯಾಪ್ತಿ ಕಂಪ್ಲೀಟ್ ಲಾಕ್ಡೌನ್ ಆಗಲಿದೆ.

ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆ, ಆವರ್ಸೆ, ಹನೆಹಳ್ಳಿ, ಕುಂದಾಪುರ ತಾಲೂಕಿನ ತಲ್ಲೂರು, ಕರ್ಕುಂಜೆ, ಯಡಮೊಗೆ ಹಾಗೂ ಕಾರ್ಕಳದ ಕಲ್ಯ ಗ್ರಾ.ಪಂ ಲಾಕ್ಡೌನ್ ಆಗಲಿದೆ.

ಈ ಗ್ರಾಮಾ ಪಂಚಾಯತ್ ಗಳು ಜೂನ್ 5 ರಿಂದ ಸಂಪೂರ್ಣ ಲಾಕ್ ಆಗಲಿದ್ದು, ಅಗತ್ಯ ವಸ್ತುಗಳ ಖರೀದಿ ಗೆ ನಾಳೆ (ಶುಕ್ರವಾರ) ಅವಕಾಶ ನೀಡಲಾಗಿದೆ.
ಶನಿವಾರ ಮತ್ತು ಭಾನುವಾರ‌ ಅಂದರೆ ಜೂನ್ 5 ಬೆಳಗ್ಗೆ 6 ರಿಂದ ಜೂನ್ 7 ಬೆಳಗ್ಗೆ 6 ರ ವರೆಗೆ ಲಾಕ್ ಡೌನ್ ಇರಲಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.