ಕರಾವಳಿ

ಕೊರೋನಾದಿಂದ ಮೃತಪಟ್ಟವರ ಕುಟುಂಬಕ್ಕೆ 4 ಲಕ್ಷ ಪರಿಹಾರ ಯೋಜನೆ ಸುಳ್ಳು ವದಂತಿ: ಉಡುಪಿ ಡಿಸಿ

Pinterest LinkedIn Tumblr

ಉಡುಪಿ: ಕೋವಿಡ್ ನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬದವರಿಗೆ ಕೇಂದ್ರ ಸರ್ಕಾರದಿಂದ 4ಲಕ್ಷ ರೂಪಾಯಿಗಳ ಪರಿಹಾರ ನೀಡಲಾಗುವುದು ಎಂಬುದು ಸುಳ್ಳು ಸಂದೇಶ ಎಂದು ಉಡುಪಿ‌ ಜಿಲ್ಲಾಧಿಕಾರಿ ಜಿ. ಜಗದೀಶ್ ಸ್ಪಷ್ಟಪಡಿಸಿದ್ದಾರೆ.

ಅನಧೀಕೃತ ಮೂಲಗಳಿಂದ 4 ಲಕ್ಷ ಪರಿಹಾರದ ವಿಚಾರದಲ್ಲಿ ಸುಳ್ಳು ಸಂದೇಶ ರವಾನಿಸಿದ್ದು ಈ ಬಗ್ಗೆ ಅರ್ಜಿಗಳು ಜಿಲ್ಲಾಧಿಕಾರಿ ಕಚೇರಿಯಲ್ಲಿ ದೊರೆಯುತ್ತದೆ ಎಂದು ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನೆಯಾಗುತ್ತಿದೆ. ಅಂತಹ ಯಾವುದೇ ಯೋಜನೆ ಇಲ್ಲವೆಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಸ್ಪಷ್ಟಪಡಿಸಿದ್ದಾರೆ.

Comments are closed.