
ಮಂಗಳೂರು : ನಗರದ ಶಕ್ತಿನಗರದ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿರುವ ಎಂಪಿಡಬ್ಲ್ಯೂ /ಆಶಾ ಕಾರ್ಯಕರ್ತೆಯರಿಗೆ ಇಂದು ತಾ 27.5.2021ರಂದು ಕಾಂಗ್ರೆಸ್ ವತಿಯಿಂದ ದಿನಸಿ ಸಾಮಗ್ರಿಗಳ ಕಿಟ್ ಗಳನ್ನು ಮಾಜಿ ಶಾಸಕರು ಹಾಗೂ ಜಿಲ್ಲಾ ಕಾಂಗ್ರೆಸ್ ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷರಾದ ಜೆ. ಆರ್. ಲೋಬೊರವರು ವಿತರಿಸಿದರು.

ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ, ಕೋವಿಡ್ ಸಂದಿಗ್ದ ಸಮಯದಲ್ಲಿ ಆಶಾ ಕಾರ್ಯಕರ್ತೆಯರು ಬಹಳಷ್ಟು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಅವರ ಅರೋಗ್ಯಕ್ಕೆ ತೊಂದರೆ ಕೂಡ ಉಂಟಾಗಿದೆ. ಆದರೂ ಅವರು ಕೋವಿಡ್ ಸೋಂಕಿತರ ಮನೆಗಳಿಗೆ ತೆರಳಿ ಅವರಿಗೆ ಬೇಕಾದ ಔಷಧಿ ಮತ್ತು ಮಾಹಿತಿಗಳನ್ನು ಒದಗಿಸುತ್ತಿದ್ದಾರೆ. ಅವರ ಅರೋಗ್ಯದ ಬಗ್ಗೆ ನಾವು ಕೂಡ ಕಾಳಜಿ ವಹಿಸಬೇಕು ಎಂದರು.

ಟಾಸ್ಕ್ ಫೋರ್ಸ್ ಸಂಚಾಲಕ ಶುಭೋದಯ ಆಳ್ವ, ಬ್ಲಾಕ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಟಿ. ಕೆ. ಸುಧೀರ್, ನೀರಜ್ ಪಾಲ್, ಆಶಾ ಲತಾ, ದಯಾನಂದ ನಾಯಕ್, ಯಶ್ ವಾಂತ್ ಪ್ರಭು, ರಮಾನಂದ್ ಪೂಜಾರಿ, ರಾಕೇಶ್ ದೇವಾಡಿಗ,ಸುನಿತ್ ಡೇಸಾ, ರಘುರಾಜ್ ಕದ್ರಿ, ಪ್ರೇಮ್ ಬಲ್ಲಾಳ್ ಬಾಗ್, ಉದಯ್ ಕುಂದರ್, ಸ್ಟಾನಿ, ವಿಜಯ ಬಾಬು, ರೀತೇಶ್, ಫಿಲಿಪ್, ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.
Comments are closed.