
ಮಂಗಳೂರು, ಮೇ.25 : ಲಾಕ್ಡೌನ್ ನಿಂದಾಗಿ ರಸ್ತೆ ಬದಿಯಲ್ಲಿರುವ ನಿರ್ಗತಿಕರಿಗೆ ಊಟದ ವಿತರಣಾ ಕಾರ್ಯಕ್ರಮವು ಇಂದು 23ನೇ ದಿನಕ್ಕೆ ಕಾಲಿಟ್ಟಿದ್ದು, ಲಾಕ್ಡೌನ್ ಮುಗಿಯುವವರೆಗೂ ಮುಂದುವರಿಯಲಿದೆ ಎಂದು ಇಂಡಿಯನ್ ಸೀನಿಯರ್ ಚೇಂಬರ್ ಮಂಗಳೂರು ಲೀಜನ್ ಅಧ್ಯಕ್ಷ ಜಿ ಕೆ ಹರಿಪ್ರಸಾದ ರೈ ಕಾರಮೊಗರು ಗುತ್ತು ತಿಳಿಸಿದ್ದಾರೆ.
ಇದೇ ಮೇ ತಿಂಗಳ 3ನೇ ತಾರೀಕಿನಂದು ಇಂಡಿಯನ್ ಸೀನಿಯರ್ ಚೇಂಬರ್ ರಾಷ್ಟ್ರೀಯ ಅಧ್ಯಕ್ಷರಾಗಿರುವ ಮಂಗಳೂರಿನವರಾದ ಡಾ. ಅರವಿಂದ ರಾವ್ ಕೇದಿಗೆಯವರು ಸಹಾಯ ಧನ ನೀಡಿ ಪ್ರೋತ್ಸಾಹಿಸಿ ಉದ್ಘಾಟಿಸಿದ ನಿರ್ಗತಿಕರ ಹಸಿವು ನೀಗಿಸುವ ಕಾರ್ಯಕ್ರಮ ಹಲವಾರು ಉದಾರ ದಾನಿಗಳ ಸಹಯೋಗದಿಂದ 23 ನೇ ದಿನದಂದೂ ಮುಂದುವರಿದಿದೆ.

ಪ್ರತಿದಿನ ಇಂಡಿಯನ್ ಸೀನಿಯರ್ ಚೇಂಬರ್ ಮಂಗಳೂರು ಲೀಜನ್ ವತಿಯಿಂದ ನಿರ್ಗತಿಕ ರಸ್ತೆ ಬದಿಯಲ್ಲಿರುವರಿಗೆ ಊಟ ವಿತರಣಾ ಕಾರ್ಯಕ್ರಮವನ್ನು ಬೆಳಿಗ್ಗೆ 11.30 ರಿಂದ ಮದ್ಯಾಹ್ನ 2ರ ವರೆಗೆ ಮಂಗಳೂರಿನ ಮಲ್ಲಿಕಟ್ಟೆ ಯಿಂದ ಬಂಟ್ಸ್ ಹಾಸ್ಟೆಲ್, ಪಿವಿಎಸ್, ಸಿಟಿ ಸೆಂಟರ್, ಹಂಪನ್ ಕಟ್ಟೆ,ವೆಲೆನ್ಸಿಯಾ, ಅತ್ತವರ, ಜ್ಯೋತಿ, ಆಗ್ನೆಸ್, ಕಂಕನಾಡಿ, ರೈಲ್ವೆ ಟೇಷನ್, ಕಾರ್ ಸ್ವೀಟ್,ಕುದ್ರೋಳಿ, ಲಾಲ್ ಬಾಗ್, ಕೆ ಎಸ್ ಆರ್ ಟಿ ಸಿ ಪರಿಸರದವರಿಗೆ ವಿತರಣಾ ಕಾರ್ಯಕ್ರಮ ನಡೆಯುತ್ತಿದೆ.
ಈ ಕಾರ್ಯಕ್ರಮದ ಹಿಂದಿರುವ ಚಾಲನಾ ಶಕ್ತಿ ಇಂಡಿಯನ್ ಸೀನಿಯರ್ ಚೇಂಬರ್ ಮಂಗಳೂರು ಲೀಜನ್ ಅಧ್ಯಕ್ಷ ಹರಿಪ್ರಸಾದ್ ರೈ ಯವರು ಮತ್ತು ಇವರೊಂದಿಗೆ ಸಕ್ರೀಯವಾಗಿ ಕೈಜೋಡಿಸುತ್ತಿರುವ ಕಾರ್ಯದರ್ಶಿ ಶಾಲಿನಿ ಪಿ ಸುವರ್ಣರವರು.

ಈವರೆಗೆ ಈ ಸೇವಾ ಕಾರ್ಯಕ್ರಮದಲ್ಲಿ ದಾನಿಗಳಾದ ಡಾ. ಅರವಿಂದ ರಾವ್ ಕೇದಿಗೆ, ನಿಶಿತಾ ಆಳ್ವ, ಧೀರಜ್ ಶೆಟ್ಟಿ, ಅಶೋಕ್ ಎಂಕೆ, ಲತಾ ಕರ್ಕೇರಾ, ಮೀರಾ ಶೆಟ್ಟಿ, ಕಿಶೋರ್ ಫೆರ್ನಾಂಡೀಸ್, ಚಿತ್ರ ಕುಮಾರ್ ಉಡುಪಿ, ಮಂಗಳೂರು ಲಯನ್ಸ್ ಟ್ರಸ್ಟ್, ಶಿವಾನಂದ ಪರ್ಕಳ, ಉಮೇಶ್ ಹೆಗ್ಡೆ, ಶಾಂತಾ ಮೆಲಾಂಟಾ, ಸುಂದರ ಶೆಟ್ಟಿ ಪುತ್ತೂರು, ಕಿರಣ್ ಹೆಗ್ಡೆ ಮಾಣಿ, ವಿಲ್ಸನ್ ಡಿಸೋಜಾ, ಮಿಜಾರ್ ಗುತ್ತು ಮೀನಾಕ್ಷಿ ಆಳ್ವ, ವಜ್ರಾಕ್ಷಿ ಭಾಸ್ಕರ್, ರಮೇಶ್ ಶೆಟ್ಟಿ, ಶಾಲಿನಿ ಪಿ ಸುವರ್ಣ, ಪ್ರತಿಭಾ ಶೆಟ್ಟಿ, ದಿವ್ಯಾ ರೈ, ಮಿಜಾರ್ ಮಿನಾಕ್ಷಿ ಜಯಕರ ಆಳ್ವ, ಪ್ರಮೋದ್ ಸುವರ್ಣ, ಶೀನ ಪುಜಾರಿ, ಮುಲ್ಕಿ ಪ್ರತಿಭಾ ವೆಂಕಟೇಶ್, ಸಾಯಿನಾಥ್ ರೈ, ರಾಘವೇಂದ್ರ ಹೊಳ್ಳ, ಅಲ್ಡ್ರಿನ್ ವಾಸ್, ಮತ್ತಿತರರು ಕೈಜೋಡಿಸಿದ್ದಾರೆ.

ಪುತ್ತೂರಿನ ಸತ್ವಂ ಹರ್ಬಲ್ ಡ್ರಿಂಕ್ಸ್ ಸಂಸ್ಥೆ ಕುಡಿಯುವ ನೀರಿನ ಬಾಟಲಿಗಳನ್ನು ನೀಡಿ ಸಹಕರಿಸಿತ್ತು.ಈ ಎಲ್ಲಾ ದಾನಿಗಳಿಗೆ ಅಧ್ಯಕ್ಷ ಹರಿಪ್ರಸಾದ್ ರೈಯವರು ಹೃದಯ ಸ್ಪರ್ಶ ಅಭಿನಂದನೆಗಳನ್ನು ಸಲ್ಲಿಸಿರುವರು ಈಗಾಗಲೇ 23ದಿವಸದಲ್ಲಿ ಸುಮಾರು 4500 ಕ್ಕಿಂತ ಹೆಚ್ಚು ಜನರಿಗೆ ಊಟವನ್ನು ನೀಡಲಾಗಿದೆ.
ಈ ಸೇವಾ ಕಾರ್ಯಕ್ರಮ ಲಾಕ್ಡೌನ್ ಮುಗಿಯುವವರೆಗೂ ಮುಂದುವರಿಯುವುದು ಮತ್ತು ಕೆಲಸ ನಮ್ಮದು ಯಶಸ್ಸಿನ ರೂವಾರಿಗಳು ಈವರೆಗೆ ನಮಗೆ ಸಹಕರಿಸಿದವರು ಹಾಗೂ ಮುಂದೆ ಸಹಕರಿಸಲಿರುವವರು ಎಂದು ಇಂಡಿಯನ್ ಸೀನಿಯರ್ ಚೇಂಬರ್ ಮಂಗಳೂರು ಲೀಜನ್ ಅಧ್ಯಕ್ಷ ಹರಿಪ್ರಸಾದ್ ರೈ ಯವರು ಹೇಳಿರುವರು.
ಅದೇ ರೀತಿ ಸದಸ್ಯರು, ಮಿತ್ರರು ತನು-ಮನ-ಧನ ಅಥವಾ ಅಡುಗೆ ಮಾಡಿ ಕೊಡುವ ಮೂಲಕ ಸಹಕಾರವನ್ನು ನೀಡುವುವರೇ ಅದೇ ರೀತಿ ನೀರಿನ ವ್ಯವಸ್ಥೆ,ಮಾಸ್ಕ್ ನ ವ್ಯವಸ್ಥೆ ಸಹಕಾರವನ್ನು ನೀಡುವರೆ ನೇರವಾಗಿ 8660377357 ಸಂಪರ್ಕಿಸ ಬೇಕಾಗಿ ಅಧ್ಯಕ್ಷರು ವಿನಂತಿಸಿದ್ದಾರೆ.
Comments are closed.