ಕರಾವಳಿ

ಮಂಗಳೂರಿನಲ್ಲಿ ಖಾಸಗಿ ಬಸ್ ಬೆಂಕಿಗಾಹುತಿ : ಮಾಲ್ಹಕರಿಗೆ ಲಕ್ಷಾಂತರ ನಷ್ಟ

Pinterest LinkedIn Tumblr

ಮಂಗಳೂರು, ಮೇ. 18: ನಗರದ ಮಂಗಳಾದೇವಿ ಬಳಿ ರಸ್ತೆ ಬದಿ ನಿಲ್ಲಿಸಿದ್ದ ಖಾಸಗಿ ಬಸ್ ಒಂದು ಬೆಂಕಿಗೆ ಆಹುತಿಯಾದ ಘಟನೆ ಮಂಗಳವಾರ ಮುಂಜಾನೆ ನಡೆದಿದೆ.

ನರೇಶ್ ಪೂಜಾರಿ ಮಾಲಕತ್ವದ ರಾಜಲಕ್ಷ್ಮಿ ಟ್ರಾವೆಲ್ಸ್ 15 ನಂಬರಿನ ಬಸ್ ಇವತ್ತು ಮುಂಜಾನೆ ಆಕಸ್ಮಿಕ ಬೆಂಕಿ ತಗುಲಿ ಸುಟ್ಟು ಹೋಗಿದೆ. ಇದರಿಂದ ಮಾಲಕರಿಗೆ ಲಕ್ಷಾಂತರ ರೂ. ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ.

ಲಾಕ್ ಡೌನ್ ಹಿನ್ನೆಲೆಯಲ್ಲಿ ರಸ್ತೆ ಬದಿ ನಿಲ್ಲಿಸಲ್ಪಟ್ಟ ಬಸ್‌ಗೆ ಇಂದು ಮುಂಜಾನೆ ಎರಡು ಗಂಟೆ ಸುಮಾರಿಗೆ ಬೆಂಕಿ ತಗಲಿದೆ ಎನ್ನಲಾಗಿದ್ದು ಬಸ್ ಸಂಪೂರ್ಣ ಸುಟ್ಟು ಹೋಗಿದೆ.

ಲಾಕ್ ಡೌನ್ ಹಿನ್ನೆಲೆಯಲ್ಲಿ ಅಕ್ಕಪಕ್ಕದಲ್ಲಿ ಬೇರೆ ಕೆಲವು ಬಸ್ ಗಳನ್ನು ಕೂಡ ನಿಲ್ಲಿಸಲಾಗಿತ್ತು. ಅದೃಷ್ಟವಶಾತ್ ಈ ಬಸ್ ಗಳಿಗೆ ಯಾವೂದೇ ಹಾನಿ ಸಂಭವಿಸಲಿಲ್ಲ.

Comments are closed.