
(ಸಾಂದರ್ಭಿಕ ಚಿತ್ರ)
ಮಂಗಳೂರು : ಕೋವಿಡ್-19 ರೋಗಿಗಳಿಗೆ ಸಮಂಜಸ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ಒದಗಿಸುವ ನಿಟ್ಟಿನಲ್ಲಿ ಎಲ್ಲಾ ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್ ಗಳು, ಖಾಸಗಿ ವೈದ್ಯಕೀಯ ಸಂಸ್ಥೆಗಳು, ಸ್ಕ್ಯಾನಿಂಗ್ ಕೇಂದ್ರಗಳು, ಇತ್ಯಾದಿಗಳಲ್ಲಿ ಕೋವಿಡ್ -19 ಪ್ರಕರಣಗಳಿಗೆ ನಡೆಸುವ ಹೆಚ್.ಆರ್.ಸಿ.ಟಿ / ಸಿ.ಟಿ. ಮತ್ತು ಡಿಜಿಟಲ್ ಎಕ್ಸ್ ರೇ / ಎಕ್ಸ್ ರೇ ಗಳಿಗೆ ಸರಕಾರವು ಈ ಕೆಳಕಂಡಂತೆ ದರವನ್ನು ನಿಗದಿಪಡಿಸಿರುತ್ತದೆ.
ಹೆಚ್.ಆರ್.ಸಿ.ಟಿ / ಸಿಟಿ ಸ್ಕ್ಯಾನ್ ಬಿಪಿಎಲ್ ಕಾರ್ಡ್ ಗಳನ್ನು ಹೊಂದಿರುವ ಪ್ರತೀ ರೋಗಿಗಳಿಗೆ ರೂ. 1500/-(including consumables, sanitization, etc) ಎಲ್ಲಾ ವಯೋಮಾನದವರಿಗೆ ಹಾಗೂ ಇತರ ರೋಗಿಗಳಿಗೆ ರೂ. 2500/- (including consumables, sanitization, etc) ಎಲ್ಲಾ ವಯೋಮಾನದವರಿಗೆ. ಡಿಜಿಟಲ್ ಎಕ್ಸ್ ರೇ /ಎಕ್ಸ್ ರೇ ಗೆ ರೂ. 250/- (including consumables, sanitization, etc) ಪ್ರತಿ ರೋಗಿಗೆ ಎಲ್ಲಾ ವಯೋಮಾನದವರಿಗೆ ನಿಗಧಿಪಡಿಸಿದೆ.
ಸಾರ್ವಜನಿಕರು ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ಜಿಲ್ಲಾಡಳಿತದೊಂದಿಗೆ ಸಹಕರಿಸಲು ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
Comments are closed.