ಕರಾವಳಿ

ಬಡ ವರ್ಗದ ಕೋವಿಡ್ ಸೋಂಕಿತರಿಗೆ ಮಾಜಿ ಶಾಸಕ ಜೆ. ಆರ್. ಲೋಬೊರಿಂದ ದಿನಸಿ ಕಿಟ್ ವಿತರಣೆ

Pinterest LinkedIn Tumblr

ಮಂಗಳೂರು: ದ. ಕ. ಜಿಲ್ಲಾ ಕಾಂಗ್ರೆಸ್ ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿ ವತಿಯಿಂದ ಆರ್ಥಿಕವಾಗಿ ಬಹಳಷ್ಟು ನೊಂದಿರುವ ಕೋವಿಡ್ ಸೋಂಕಿತರಿಗೆ ಅವರ ಮನೆಗೆ ತೆರಳಿ ಮಂಗಳೂರು ದಕ್ಷಿಣ ಕ್ಷೇತ್ರದ ಮಾಜಿ ಶಾಸಕರಾದ ಜೆ. ಆರ್. ಲೋಬೊ ರವರು ಆಹಾರ ದಿನಸಿ ಕಿಟ್ ಗಳನ್ನು ವಿತರಿಸಿ, ಅವರ ಯೋಗ ಕ್ಷೇಮ ವಿಚಾರಿಸಿದರು.

ಅವರು ನಂತೂರು ಬಿಷಪ್ ಕಾಂಪೌಂಡ್, ಬೆಂದೂರ್ ವೆಲ್, ಜೆಪ್ಪು ಮೋರ್ಗನ್ ಗೇಟ್, ಮಹಾಕಾಳಿಪಡ್ಪು, ಮುಳಿಹಿತ್ಲು, ಹೊಯಿಗೆಬಜಾರ್, ಅಶೋಕ್ ನಗರ ಮೊದಲಾದ ಪ್ರದೇಶಗಳಲ್ಲಿರುವ ಕೋವಿಡ್ ಸೋಂಕಿತರ ಮನೆಗಳಿಗೆ ಭೇಟಿ ನೀಡಿ ಆಹಾರ ದಿನಸಿ ಕಿಟ್ ಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪದಾಧಿಕಾರಿಗಳಾದ ಶುಭೋದಯ ಆಳ್ವ, ಟಿ. ಕೆ. ಸುಧೀರ್, ನೀರಜ್ ಪಾಲ್,, ದುರ್ಗಾ ಪ್ರಸಾದ್, ಚೇತನ್ ಕುಮಾರ್, ಜೇಮ್ಸ್ ಪ್ರವೀಣ್, ಮಂಜುಳಾ ನಾಯಕ್, ಉದಯ್ ಕುಂದರ್, ಲಕ್ಷ್ಮಣ ಶೆಟ್ಟಿ, ಶಾನ್ ಡಿಸೋಜಾ, ಯಶವಂತ ಪ್ರಭು, ಪ್ರಕಾಶ್, ಶಾಲಿನಿ, ಯೋಗೇಶ್ ನಾಯಕ್, ಪ್ರಭಿತ್ ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು.

Comments are closed.