ಕರಾವಳಿ

ಇಂದಿನಿಂದ ಮತ್ತೆ 14 ದಿನ ಲಾಕ್‌ಡೌನ್ : ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಗ್ರಾಹಕರು – ಬಳಿಕ ಇಡೀ ಜಿಲ್ಲೆ ಸಂಪೂರ್ಣ ಸ್ತಬ್ಧ

Pinterest LinkedIn Tumblr

ಮಂಗಳೂರು. ಮೇ.10: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರದಿಂದ ಆರಂಭಗೊಂಡಿರುವ ಲಾಕ್‌ಡೌನ್‌ಗೆ ಸಾರ್ವಜನಿಕರು ಉತ್ತಮ ಪ್ರತಿಕ್ರಿಯೆ ನೀಡಿದ್ದು, ಅವಶ್ಯ ವಸ್ತುಗಳ ಖರೀದಿಗೆ ನೀಡಿದ ಸಮಯ ಮುಗಿದ ಕೂಡಲೇ ಎಲ್ಲರು ಮನೆಗೆ ತೆರಳಿದ್ದರಿಂದ ಮಂಗಳೂರು ಸೇರಿದಂತೆ ಇಡೀ ಜಿಲ್ಲೆ ಬಿಕೋ ಎನ್ನುತ್ತಿತ್ತು.

ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕದಾದ್ಯಂತ ಇಂದಿನಿಂದ ಮೇ.14ರವರೆಗೆ ಲಾಕ್‌ಡೌನ್ ವಿಧಿಸಿದ್ದು, ಬೆಳ್ಳಗ್ಗೆ 6 ರಿಂದ 10ಗಂಟೆಯ ವರೆಗೆ ದಿನಸಿ ಹಾಗೂ ತರಕಾರಿಯನ್ನು ಖರೀದಿಸಲು ಮಾತ್ರ ಅವಕಾಶ ನೀಡಿದೆ.

ಕಳೆದ ವಾರಕ್ಕೆ ಹೋಲಿಸಿದರೆ ಸಾರ್ವಜನಿಕರು ತಮ್ಮ ಮನೆಗಳಲ್ಲಿ ಇರುವ ಮೂಲಕ ಈ ವಾರದ ಲಾಕ್‌ಡೌನ್ ಅನ್ನು ಬೆಂಬಲಿಸಿದ್ದಾರೆ. ಆದರೆ ಬೆಳಿಗ್ಗೆ 6ರಿಂದ 9ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಸರ್ಕಾರ ಅವಕಾಶ ನೀಡಿದ್ದರಿಂದ ಕೆಲವೆಡೆ ಅಂಗಡಿಗಳಲ್ಲಿ ಜನರು ಮುಗಿ ಬಿದ್ದರು. ಮತ್ತೂ ಕೆಲವು ವ್ಯಾಪಾರ ಮಳಿಯ ಮುಂದೆ ಉದ್ದ ಉದ್ದದ ಸರತಿ ಸಾಲು ಕಂಡು ಬಂತು.

ನಗರದ ಕೇಂದ್ರ ಮಾರುಕಟ್ಟೆ ಬಳಿ ಜನಸಂದಣಿ ಸೇರುವ ಹಿನ್ನೆಲೆಯಲ್ಲಿ ಅಲ್ಲಿ ವ್ಯಾಪವನ್ನು ನಿಷೇಧಿಸಲಾಗಿದೆ. ಆದರೆ ನಗರದ ಕಾಕ್ಲ್ ಟವರ್ ಮುಂದುಗಡೆಯಿಂದ ಕೇಂದ್ರ ಮಾರುಕಟ್ಟೆಗೆ ಸಾಗುವ ರಸ್ತೆಯಲ್ಲಿ ದಿನಸಿ ಹಾಗೂ ತರಕಾರಿಯನ್ನು ಖರೀದಿಸಲು ಜನರು ಸಾಮಾಜಿಕ ಅಂತರ ಮರೆತು ಮುಗಿಬಿದ್ದಿದ್ದರಿಂದ ಗ್ರಾಹಕರಲ್ಲಿ ಸಾಮಾಜಿಕ ಅಂತರವನ್ನು ಕಾಪಾಡುವಂತೆ ಪೋಲಿಸರು ಮನವಿ ಮಾಡಿಕೊಂಡರು.

ಇದೇ ವೇಳೆ ಅಗತ್ಯ ವಸ್ತುಗಳ ಖರೀದಿಗೆ ವಾಹನ ಬಳಸದಂತೆ ಹಾಗೂ ತೀವ್ರ ಅಗತ್ಯವಿದ್ದರೆ ಮಾತ್ರ ಬಳಸುವಂತೆ ಮಂಗಳೂರು ನಗರ ಪೊಲೀಸ್ ಅಯುಕ್ತರು ಆದೇಶ ಹೊರಡಿಸಿದ್ದರು. ಆದರೆ ಈ ಅದೇಶವನ್ನು ಗಾಳಿಗೆ ತೂರಿ ನಗರದಾದ್ಯಂತ ಅನೇಕ ವಾಹನಗಳು ಬೇಕಾಬಿಟ್ಟಿಯಾಗಿ ಸಂಚರಿಸುತ್ತಿದ್ದವು.

ಈ ವಾಹನಗಳನ್ನು ನಿಯಂತ್ರಿಸಲು ಪೋಲಿಸರು ಹರ ಸಾಹಸ ಪಟ್ಟಿದ್ದಾರೆ. ಬೆಳಿಗ್ಗೆ 6 ಗಂಟೆಯಿಂದಲೇ ಫಿಲ್ಡ್‌ಗಿಳಿದ ಪೊಲೀಸರು ಪ್ರತಿಯೊಂದು ವಾಹನಗಳನ್ನು ಪರಿಶೀಲಿಸುತ್ತಿದ್ದರು.

ಸರಕು ವಾಹನಗಳು, ಸರ್ಕಾರಿ ಸೇವಾ ವಾಹನಗಳು ಮತ್ತು ಆಂಬುಲೆನ್ಸ್‌ಗಳ ಸಂಚಾರಕ್ಕೆ ಯಾವುದೇ ನಿರ್ಬಂಧವಿರಲಿಲ್ಲ. ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ತಮ್ಮ ಕರ್ತವ್ಯಕ್ಕಾಗಿ ಅನುಮತಿ ಪಡೆದ ಕೆಲವರು ಮತ್ತು ಸರ್ಕಾರಿ ಅಧಿಕಾರಿಗಳು ಮಾತ್ರ ರಸ್ತೆಯಲ್ಲಿ ಕಾಣಿಸಿಕೊಂಡರು.

ಇನ್ನು ಅಂತರ್ ಜಿಲ್ಲೆ ಮತ್ತು ಅಂತರ್ ರಾಜ್ಯ ಸಂಚಾರ ನಿಷೇಧಿಸಲಾಗಿದ್ದು, ಜಿಲ್ಲೆಯ ನಾಲ್ಕು ಪ್ರಮುಖ ಗಡಿಗಳನ್ನು ಮುಚ್ಚಲಾಗಿದೆ. ಆರೋಗ್ಯ ತುರ್ತು ಸಂದರ್ಭದಲ್ಲಿ ಮಾತ್ರ ಜನರು ಅನುಮತಿ ಪಡೆದು ಗಡಿ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ.

Comments are closed.