ಕರಾವಳಿ

ಸರ್ಕಾರದ ವೈಫಲ್ಯಗಳೇ ಲಾಕ್‌ಡೌನ್‌ಗೆ ಮೂಲ ಕಾರಣ : ಶಾಸಕ ಖಾದರ್ ಆರೋಪ

Pinterest LinkedIn Tumblr

ಮಂಗಳೂರು, ಎಪ್ರಿಲ್ 28: ಕೋರೋನಾ ಬಂದಾಗಿನಿಂದ ಇದ್ದ ವೈಫಲ್ಯಗಳು ಸ್ಪೋಟಗೊಂಡಿರುವುದೇ ಈಗ ಹೇರಲಾಗಿರುವ ಲಾಕ್ ಡೌನ್ ಗೆ ಮೂಲ ಕಾರಣ ಎಂದು ಶಾಸಕ ಯು.ಟಿ.ಖಾದರ್ ಆರೋಪಿಸಿದ್ದಾರೆ.

ರಾಜ್ಯಕ್ಕೆ ಕೋರೋನಾ ಸೋಂಕು ತಗುಲಿದ ಆರಂಭದಿಂದಲೇ ಅದನ್ನು ತಡೆಗಟ್ಟುವಲ್ಲಿ ಸರಕಾರ ವೈಫಲ್ಯಗೊಂಡಿತ್ತು.ಎಷ್ಟೇ ವೈಫಲ್ಯಗಳು ಇದ್ದರೂ ಕೂಡಾ ಎಲ್ಲವೂ ಸರಿಯಿದೆಯೆಂಬ ರೀತಿಯಲ್ಲಿ ಬಿಂಬಿಸಲಾಗುತ್ತಿತ್ತು.ಆದರೆ ಇದೀಗ ವೈಫಲ್ಯಗಳು ಸ್ಪೋಟಗೊಂಡು ಸರಕಾರದ ಬಣ್ಣ ಬಯಲಾಗಿ ಲಾಕ್ ಡೌನ್ ಹೇರಲಾಗಿದೆ ಎಂದು ಖಾದರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ನೆಲೆಸಿರುವ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು,ವ್ಯಾಪಾರಿಗಳು ಹಾಗೂ ಉದ್ಯೋಗಿಗಳಿಗಾಗಿ ಹೆಚ್ಚುವರಿ ಸರಕಾರೀ ಬಸ್ಸುಗಳನ್ನು ಆಯೋಜಿಸುವಂತೆ ಈ ವೇಳೆ ಖಾದರ್ ಆಗ್ರಹಿಸಿದರು.

ಅಲ್ಲದೆ ಹೋಟೆಲ್, ರೆಸ್ಟೋರೆಂಟ್ ಗಳ ಪಾರ್ಸೆಲ್ ಗಳಿಗೆ ನೀಡಿದ ವಿನಾಯಿತಿಯಂತೆ ರಾಜ್ಯದ್ಲಲಿರುವ ಟೈಲರ್ ಗಳಿಗೆ ಗ್ರಾಹಕರನ್ನು ಬಟ್ಟೆಗಳನ್ನು ಹೊಲಿದು ಮನೆ ಮನೆಗಳಿಗೆ ತಲುಪಿಸಲು ವಿನಾಯಿತಿ ನೀಡಬೇಕೆಂದು ಸರ್ಕಾರವನ್ನು ಅವರು ಒತ್ತಾಯಿಸಿದ್ದಾರೆ.

ಲಸಿಕೆಗೆ ಇರುವ ನಿರ್ಭಂಧಗಳನ್ನು ಸಡಿಲಗೊಳಿಸಿ ಆಸ್ಪತ್ರೆಗಳಿಗೆ ಮುಕ್ತವಾಗಿ ಸಿಗುವಂಥಾಗಲು ಬೇಕಾಗುವ ಕ್ರಮವನ್ನು ಸರಕಾರ ಕೈಗೊಳ್ಳಬೇಕು. ಲಾಕ್ ಡೌನ್ ಸಂದರ್ಭದಗಳಲ್ಲಿ ಹಮ್ಮಿಕೊಳ್ಳುವ ಲಸಿಕೆ ಶಿಬಿರಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದು ಯು.ಟಿ.ಖಾದರ್ ಸರ್ಕಾರವನ್ನು ಆಗ್ರಹಿಸಿದ್ದಾರೆ.

Comments are closed.