ಬೆಂಗಳೂರು: ಕೊರೊನಾ ನಿಯಂರಣದ ಹಿನ್ನೆಲೆ ರಾಜ್ಯ ಪೊಲೀಸ್ ಇಲಾಖೆಯಿಂದ ತೆಗೆದುಕೊಳ್ಳುವ ಕ್ರಮಗಳನ್ನು ಪರಾಮರ್ಶಿಸಲು ಮತ್ತು ಮಾರ್ಗಸೂಚಿಗಳ ಪಾಲನೆ ಮಾಡುವ ನಿಟ್ಟಿನಲ್ಲಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅವರು 7 ವಲಯಗಳಿಗೆ ಐಪಿಎಸ್ ಅಧಿಕಾರಿಗಳನ್ನ ನೇಮಕ ಮಾಡಿದ್ದಾರೆ.

26ನೇ ತಾರೀಖಿನ ಒಳಗೆ ಎಲ್ಲಾ ಕಾರ್ಯಗಳನ್ನ ಪರಾಮರ್ಶಿಸಿ ಡಿಜಿ-ಐಜಿಪಿಗೆ ವರದಿ ನೀಡಲು ಈ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೆ ಕೋವಿಡ್ 19 ಸಮಸ್ಯೆ ಬಗೆಹರಿಯುವವರೆಗೂ ಈ ಎಲ್ಲಾ ಅಧಿಕಾರಿಗಳು ತಮಗೆ ನಿಗದಿ ಮಾಡಲಾದ ವಲಯಕ್ಕೆ ಭೇಟಿ ನೀಡಿ ಕ್ರಮಗಳ ಬಗ್ಗೆ ಪರಿಶೀಲಿಸಲು ಪ್ರವೀಣ್ ಸೂದ್ ಸೂಚನೆ ನೀಡಿದ್ದಾರೆ.

1. ಭಾಸ್ಕರ್ ರಾವ್, ಎಡಿಜಿಪಿ ರೈಲ್ವೇಸ್: ಉತ್ತರ ವಲಯ- ವಿಜಯಪುರ ಬಾಗಲಕೋಟೆ ಮತ್ತು ಬೆಳಗಾವಿ.
2. ಎ.ಎಸ್.ಎನ್ ಮೂರ್ತಿ,ಕೆಎಸ್ಪಿಹೆಚ್ಸಿ ಎಂಡಿ: ಬಳ್ಳಾರಿ ವಲಯ- ಬಳ್ಳಾರಿ ಮತ್ತು ರಾಯಚೂರು.
3. ಅಮ್ರತ್ ಪೌಲ್, ಎಡಿಜಿಪಿ, ನೇಮಕಾತಿ: ದಕ್ಷಿಣ ವಲಯ- ಮೈಸೂರು,ಮಂಡ್ಯ ಮತ್ತು ಹಾಸನ
4.ಅರುಣ್ ಜೆಜಿ ಚಕ್ರವರ್ತಿ, ಎಡಿಜಿಪಿ ಆಂತರಿಕ ಭದ್ರತೆ: ಈಶಾನ್ಯ ವಲಯ- ಬೀದರ್ ಮತ್ತು ಕಲ್ಬುರ್ಗಿ
5. ಸೀಮಂತ್ ಕುಮಾರ್, ಎಡಿಜಿಪಿ ಎಸಿಬಿ: ಕೇಂದ್ರ ವಲಯ- ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು
6. ಉಮೇಶ್ ಕುಮಾರ್, ಎಡಿಜಿಪಿ ಸಿಐಡಿ: ಪೂರ್ವ ವಲಯ- ಶಿವಮೊಗ್ಗ ಮತ್ತು ದಾವಣಗೆರೆ
7. ಹೇಮಂತ್ ನಿಂಬಾಳ್ಕರ್, ಪೊಲೀಸ್ ಮಹಾ ನಿರೀಕ್ಷಕರು ಡಿ.ಸಿ.ಆರ್.ಇ: ಪಶ್ಚಿಮ ವಲಯ- ದಕ್ಷಿಣ ಕನ್ನಡ ಮತ್ತು ಉಡುಪಿ
Comments are closed.