ಕರಾವಳಿ

ಎಕ್ಸಾಂ ಇರೋದಕ್ಕೆ ಬಂದ್ವಿ, ಇಲ್ಲಾಂದ್ರೆ ಮನೆಯಲ್ಲೇ ಇರುತ್ತಿದ್ವಿ: ಉಡುಪಿ ಡಿಸಿ ನಡೆಗೆ ವಿದ್ಯಾರ್ಥಿನಿ ಗರಂ..!

Pinterest LinkedIn Tumblr

ಉಡುಪಿ: ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರ ಕಾಪಾಡದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದವರನ್ನು ಕೆಳಗಿಳಿಸಿದ ಉಡುಪಿ ಜಿಲ್ಲಾಧಿಕಾರಿಗಳ ವಿರುದ್ಧ ವಿದ್ಯಾರ್ಥಿನಿಯೊಬ್ಬಳು ಆಕ್ರೋಶ ಹೊರಹಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಸೋಮವಾರ ಸಂಜೆ ಉಡುಪಿಯ ಸಂತೆಕಟ್ಟೆ ಬಳಿ ಬಸ್ ಅಡ್ಡಗಟ್ಟಿ ತಪಾಸಣೆ ನಡೆಸಿದ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್, ವಿಪರೀತ ಪ್ರಯಾಣಿಕರನ್ನು ತುಂಬಿದ್ದಕ್ಕೆ ಸ್ಥಳದಲ್ಲೇ ಖಾಸಗಿ ಬಸ್ ನಿರ್ವಾಹಕ ಹಾಗೂ ಚಾಲಕನಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಇದೇ ವೇಳೆ ವಿಪರೀತ ಪ್ರಯಾಣಿಕರನ್ನು ಹೇರಿಕೊಂಡು ಹೋಗುತ್ತಿದ್ದುದನ್ನು‌ಗಮನಿಸಿದ ಡಿಸಿ ಬಸ್ ಬಾಗಿಲಿನಲ್ಲಿ ಮತ್ತು ಒಳಗೆ ನಿಂತಿರುವವರನ್ನು ತಾವೇ ಖುದ್ದಾಗಿ ಇಳಿಸಿ ಕಳುಹಿಸಿದರು. ಬಳಿಕ ಚಾಲಕ, ನಿರ್ವಾಹಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಇದೇ ವೇಳೆ ಉಡುಪಿ ಜಿಲ್ಲಾಧಿಕಾರಿಗಳ ವಿರುದ್ಧ ವಿದ್ಯಾರ್ಥಿನಿಯೊಬ್ಬಳು ಆಕ್ರೋಶ ಹೊರಹಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಬಸ್‌ನಿಂದ ಕೆಳಗೆ ಇಳಿದ ವಿದ್ಯಾರ್ಥಿನಿ, ಜಿಲ್ಲಾಧಿಕಾರಿ ನಮ್ಮನ್ನು ಇಳಿಸಿ ಹೋಗಿದ್ದಾರೆ, ನಂತರ ಬರುವ ಬಸ್‌ನಲ್ಲೂ ಕೂಡ ಹೆಚ್ಚಿನ ಪ್ರಯಾಣಿಕರು ಇರ್ತಾರೆ. ಮನೆ ತುಂಬಾ ದೂರವಿದೆ. ಕತ್ತಲಾಗುತ್ತಿದೆ ನಾವು ಹೇಗೆ ಹೋಗೋದು ಅಂತ ಆಕ್ರೋಶ ಹೊರ ಹಾಕಿದ್ದಾಳೆ. ಪರೀಕ್ಷೆ ಇರುವ ಕಾರಣಕ್ಕೆ ನಾವು ಬಂದಿದ್ದು ಇಲ್ಲಾಂದ್ರೆ ಮನೆಲಿ ಆರಾಮಾಗಿ ಇರುತ್ತಿದ್ದೆವು ಎಂದಿದ್ದಾಳೆ. ಸದ್ಯ ವಿಡಿಯೋ ವೈರಲ್ ಆಗಿ ಜಿಲ್ಲಾಧಿಕಾರಿಗಳ ವಿರುದ್ಧ ಸೋಷಿಯಲ್ ಮಿಡಿಯಾದಲ್ಲಿ ಬಹಳಷ್ಟು ಅಸಮಾಧಾನ ವ್ಯಕ್ತವಾಗಿದೆ.

Comments are closed.