
ಮಂಗಳೂರು : ಶ್ರೀ ಕಾಳಿಕಾಂಬಾ, ವಿನಾಯಕ ದೇವಸ್ಥಾನ, ರಥಬೀದಿ,ಮಂಗಳೂರು ಇಲ್ಲಿ ಯುಗಾದಿ ಮಹೋತ್ಸವ ನಡೆಯುತ್ತಿದ್ದು ಪಂಚಮಿ ಉತ್ಸವದ ಅಂಗವಾಗಿ ಶ್ರೀ ಗುರುಮಠದ ಗುರು ಶ್ರೀ ವೀರಭದ್ರ ದೇವರ ಉತ್ಸವ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇನ್ದ್ರ ಸರಸ್ವತೀ ಮಹಾಸ್ವಾಮಿಜಿ ಯವರ ದಿವ್ಯ ಉಪಸ್ಥಿತಿಯಲ್ಲಿ ಜರಗಿತು.
ವಿಶೇಷ ಅಲಂಕ್ರಿತ ಪಲ್ಲಕಿ ಯಲ್ಲಿ ಶ್ರೀ ವೀರಭದ್ರ ದೇವರ ಬೀದಿ ಸವಾರಿ ಕ್ಷೇತ್ರದಿಂದ ಟೆಂಪಲ್ ಸ್ಕ್ವೇರ್ ತೆರಳಿ, ಕ್ಷೇತ್ರದ ತನಕ ಕ್ಷೇತ್ರದ ಪ್ರಧಾನ ತಂತ್ರಿಗಳಾದ ಬ್ರಹ್ಮಶ್ರೀ ಲಕ್ಷ್ಮೀ ಕಾಂತ ಶರ್ಮಾರ ಆಚಾರ್ಯತ್ವದಲ್ಲಿ ನಡೆಯಿತು.
ಶ್ರೀ ಕ್ಷೇತ್ರದ ಪ್ರಧಾನ ಅರ್ಚಕರಾದ ಧನಂಜಯ ಪುರೋಹಿತ್ ಮತ್ತು ವಿಘ್ನೇಶ್ ಪುರೋಹಿತ್, ಶ್ರೀಗುರು ಮಠದ ಸುದರ್ಶನ್ ಪುರೋಹಿತ್, ಸತೀಶ್ ಪುರೋಹಿತ್, ಆಡಳಿತ ಮೊಕ್ತೇಸರರಾದ ಕೆ. ಕೇಶವ ಆಚಾರ್ಯ,
ಎರಡನೇ ಮೊಕ್ತೇಸರ ಎಂ. ಸುಂದರ್ ಆಚಾರ್ಯ ಬೆಳುವಾಯಿ, ಮೂರನೇ ಮೊಕ್ತೇಸರ ಎ. ಲೋಕೇಶ್ ಆಚಾರ್ಯ ಬಿಜೈ, ಶ್ರೀ ಕ್ಷೇತ್ರದ ಆಡಳಿತ ಮಂಡಳಿ, ಜೀರ್ಣೋದ್ದಾರ ಸಮಿತಿ, ಶ್ರೀ ಕಾಳಿಕಾಂಬಾ ಸೇವಾ ಸಮಿತಿ, ವಿಶ್ವಬ್ರಾಹ್ಮಣ ಮಹಿಳಾ ಸಮಿತಿ, ದ. ಕ. ಜಿಲ್ಲಾ ಚಿನ್ನದ ಕೆಲಸಗಾರರ ಸಂಘ, ವಿಶ್ವಕರ್ಮ ಯುವ ವೇದಿಕೆ ವಿಶ್ವಕರ್ಮ ಯುವ ಮಿಲನ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.
Comments are closed.