ಬೆಂಗಳೂರು: ಸ್ಯಾಂಡಲ್ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಅವರು ಚಿಕಿತ್ಸೆ ಪಡೆದು ರೆಸ್ಟ್ ಮಾಡುತ್ತಿದ್ದಾರೆಂಬ ಸುದ್ದಿಯೊಂದು ನಿನ್ನೆ ಮಧ್ಯಾಹ್ನದಿಂದ ಹರಿದಾಡುತ್ತಲೇ ಇತ್ತು. ಇದೀಗ ಇದೇ ವಿಚಾರವಾಗಿ ಸ್ವತಃ ಕಿಚ್ಚ ಸುದೀಪ್ ಟ್ವೀಟ್ ಮಾಡಿ ಸ್ಪಷ್ಟನೆ ಕೊಟ್ಟಿದ್ದಾರೆ.
ನನಗೆ ಆರೋಗ್ಯ ಸರಿಯಿಲ್ಲ. ಸದ್ಯದಲ್ಲೇ ಗುಣಮುಖನಾಗುತ್ತೇನೆ ಎಂಬ ಭರವಸೆಯಿದೆ. ಆದರೆ ವೈದ್ಯರು ಇನ್ನೂ ಕೆಲವು ದಿನಗಳ ಕಾಲ ಸಂಪೂರ್ಣ ರೆಸ್ಟ್ ಮಾಡಬೇಕೆಂದು ಹೇಳಿದ್ದಾರೆ. ಹೀಗಾಗಿ ಬಿಗ್ಬಾಸ್ ಕನ್ನಡ 8ನೇ ಸೀಸನ್ನ ಈ ವೀಕೆಂಡ್ನ ಎಪಿಸೋಡ್ನಲ್ಲಿ ನಾನು ಪಾಲ್ಗೊಳ್ಳುವುದಿಲ್ಲ ಎಂದು ಟ್ವೀಟ್ ಮೂಲಕವಾಗಿ ತಿಳಿಸಿದ್ದಾರೆ.
Been unwell n was hoping to recover bfr the weekend. But on my docs advice I need to gv myself a bit more rest n hence Will be missing this weekends episode of BB.
Curious to know the innovative plan which the creative team'll come out with, for this week's elimination. 🤗🤗🥂— Kichcha Sudeepa (@KicchaSudeep) April 16, 2021
ಬಿಗ್ ಬಾಸ್ ಕನ್ನಡದ ಕ್ರಿಯೇಟಿವ್ ಟೀಂ ಈ ವೀಕೆಂಡ್ನಲ್ಲಿ ವಾರದ ಕತೆ ಕಿಚ್ಚನ ಜೊತೆ ಬದಲಾಗಿ ಯಾವ ರೀತಿಯ ವಿಭಿನ್ನವಾದ ಪ್ಲಾನ್ ಮಾಡಿಕೊಳ್ಳಲಿದೆ ಎಂಬ ಬಗ್ಗೆ ನನಗೂ ಕುತೂಹಲವಿದೆ. ಈ ವಾರದ ಎಲಿಮಿನೇಷನ್ ಪ್ರಕ್ರಿಯೆ ಹೇಗಾಗಲಿದೆ ಎಂಬುದನ್ನು ಕಾದು ನೋಡಿ ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿ ತಿಳಿಸಿದ್ದಾರೆ.
Comments are closed.