ರಾಷ್ಟ್ರೀಯ

ಕೇಂದ್ರ ಸಚಿವ ಹರ್ಷವರ್ಧನ್, ಫಾರೂಕ್ ಅಬ್ದುಲ್ಲಾ, ಕೋಚ್ ರವಿಶಾಸ್ತ್ರಿ ಸೇರಿದಂತೆ ಹಲವು ಗಣ್ಯರಿಗೆ ಕೋವಿಡ್ ಲಸಿಕೆ!

Pinterest LinkedIn Tumblr

ದೆಹಲಿ: ದೇಶದಲ್ಲಿ ಮತ್ತೊಂದು ಹಂತದ ಕೊರೊನಾ ಲಸಿಕೆ ವಿತರಣೆ ನಿನ್ನೆಯಿಂದ ಆರಂಭವಾಗಿದೆ. ಜನಸಾಮಾನ್ಯರಿಗೆ ಲಸಿಕೆ ಬಗ್ಗೆ ಧೈರ್ಯ ಮೂಡಿಸುವ ಸಲುವಾಗಿ ನಿನ್ನೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೊರೊನಾ ಲಸಿಕೆ ಪಡೆದಿದ್ದರು. ಇದೀಗ ಕೇಂದ್ರ ಆರೋಗ್ಯ ಖಾತೆ ಸಚಿವ ಡಾ.ಹರ್ಷವರ್ಧನ್ ಹಾಗೂ ಅವರ ಅವರ ಪತ್ನಿ ಸಹ ಲಸಿಕೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಲಸಿಕೆ ಸ್ವೀಕರಿಸುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ವಿಡಿಯೋ ಹಂಚಿಕೊಂಡಿದ್ದಾರೆ.

ಇನ್ನೊಂದೆಡೆ ಭಾರತೀಯ ಕ್ರಿಕೆಟ್​ ತಂಡದ ಕೋಚ್​ ಆಗಿರುವ ರವಿಶಾಸ್ತ್ರಿ ಸಹ ಲಸಿಕೆ ಪಡೆದಿದ್ದು, ಅವರು ಸಹ ತಮ್ಮ ಟ್ವಿಟರ್​ ಖಾತೆಯಲ್ಲಿ ಲಸಿಕೆ ಪಡೆಯುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. ಈ ಮೂಲಕ ಜನಪ್ರಿಯ ವ್ಯಕ್ತಿಗಳು ಲಸಿಕೆ ಬಗ್ಗೆ ಜನರಿಗೆ ಧೈರ್ಯ ಮೂಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಲಸಿಕೆ ಹಾಕಿಸಿಕೊಳ್ಳುವ ಮೂಲಕ ಈ ಹಂತಕ್ಕೆ ಚಾಲನೆ ನೀಡಿದರು. ಬಳಿಕ ಉಪ ರಾಷ್ಟ್ಪಪತಿ ವೆಂಕಯ್ಯ ನಾಯ್ಡು, ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌, ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಮುಂತಾದ ಅನೇಕ ಗಣ್ಯರು ಕೋವಿಡ್‌–19 ಲಸಿಕೆಯ ಮೊದಲ ಡೋಸ್‌ ಹಾಕಿಸಿಕೊಂಡಿದ್ದರು. ಇಂದು ಲಸಿಕೆ ವಿತರಣೆ ಮುಂದುವರೆದಿದ್ದು, ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ಜಮ್ಮು ಮತ್ತು ಕಾಶ್ಮೀರ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ, ಭಾರತ ಕ್ರಿಕೆಟ್ ತಂಡದ ಪ್ರಧಾನ ಕೋಚ್ ರವಿಶಾಸ್ತ್ರಿ ಸೇರಿದಂತೆ ಹಲವು ಗಣ್ಯರು ಕೋವಿಡ್ ಲಸಿಕೆ ಪಡೆದರು.

ಮೂರನೇ ಹಂತದಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಮತ್ತು 45 ವರ್ಷ ದಾಟಿದ ಇತರೆ ಅನಾರೋಗ್ಯ ಸಂಬಂಧಿತ ಸಮಸ್ಯೆಗಳಿರುವ ವ್ಯಕ್ತಿಗಳಿಗೆ ಲಸಿಕೆ ನೀಡಿಕೆ ಆರಂಭಿಸಲಾಗಿದೆ. ಈ ಹಂತದಲ್ಲಿ ದೇಶದಲ್ಲಿರುವ ಸುಮಾರು 27 ಕೋಟಿ ಮಂದಿ ಫಲಾನುಭವಿಗಳಿಗೆ ಲಸಿಕೆ ನೀಡಲು ಕೇಂದ್ರ ಸರ್ಕಾರ ಯೋಜನೆ ಹಾಕಿಕೊಂಡಿದೆ.

ಇದರ ಮುಂದುವರೆದ ಭಾಗವಾಗಿ ಲಸಿಕೆ ನೀಡಿಕೆ ಮುಂದುವರೆಸಿದ್ದು, ಇಂದು ದೆಹಲಿಯ ಹಾರ್ಟ್ ಅಂಡ್ ಲಂಗ್ಸ್ ಇನ್ಸ್ ಟಿಟ್ಯೂಟ್ ನಲ್ಲಿ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಮತ್ತು ಅವರ ಪತ್ನಿ ತಮ್ಮ ಮೊದಲ ಡೋಸ್ ಲಸಿಕೆ ಪಡೆದರು. ಅಂತೆಯೇ ಕೇಂದ್ರ ಅಲ್ಪ ಸಂಖ್ಯಾತ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಅವರು ಉತ್ತರ ಪ್ರದೇಶದ ರಾಮ್ ಪುರ್ ನಲ್ಲಿನ ಲಸಿಕೆ ವಿತರಣಾ ಕೇಂದ್ರಕ್ಕೆ ತೆರಳಿ ತಮ್ಮ ಮೊದಲ ಡೋಸ್ ಲಸಿಕೆ ಪಡೆದರು.

ಅಂತೆಯೇ ಜಮ್ಮು ಮತ್ತು ಕಾಶ್ಮೀರ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಅವರು ಶ್ರೀನಗರದಲ್ಲಿರುವ ಶೇರ್ ಇ ಕಾಶ್ಮೀರ್ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆಗೆ ತೆರಳಿ ಲಸಿಕೆ ಪಡೆದರು. ಇತ್ತ ತೆಲಂಗಾಣದಲ್ಲಿ ಟಿಆರ್ ಎಸ್ ಸಂಸದ ಕೆ ಕೇಶವರಾವ್ ಅವರು ಹೈದರಾಬಾದ್ ನಲ್ಲಿರುವ ಲಸಿಕೆ ವಿತರಣಾ ಕೇಂದ್ರಕ್ಕೆ ತೆರಳಿ ಲಸಿಕೆ ಪಡೆದರು.

ಇನ್ನು ಇಂಗ್ಲೆಂಡ್ ವಿರುದ್ಧದ ಸರಣಿ ನಿಮಿತ್ತ ಅಹ್ಮದಾಬಾದ್ ನಲ್ಲಿರುವ ಟೀಂ ಇಂಡಿಯಾ ಪ್ರಧಾನ ಕೋಚ್ ರವಿಶಾಸ್ತ್ರಿ ಅವರೂ ಕೂಡ ಲಸಿಕೆ ಪಡೆದಿದ್ದು, ಅಹ್ಮದಾಬಾದ್ ಅಪೋಲೋ ಆಸ್ಪತ್ರೆಯಲ್ಲಿ ತಮ್ಮ ಮೊದಲ ಡೋಸ್ ಲಸಿಕೆ ಪಡೆದರು.

Comments are closed.